ಜೆರುಸಲೇಮ್: ಇಸ್ರೇಲ್ನಲ್ಲಿ ಅಕ್ಟೋಬರ್ 27ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಮಾಜಿ ಮಿಲಿಟರಿ ಮುಖ್ಯಸ್ಥ ಗಾದಿ ಐಸೆನ್ಕೋಟ್ ಅವರು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಪ್ರಮುಖ ಸವಾಲಾಗಿ ಹೊರಹೊಮ್ಮಿದ್ದಾರೆ.
ದೀರ್ಘಕಾಲ ಪ್ರಧಾನಿಯಾಗಿದ್ದ ನೆತನ್ಯಾಹು ಅವರ ನಾಯಕತ್ವದ ಮೇಲಿನ ಜನಾಭಿಪ್ರಾಯ ಎಂದೇ ಪರಿಗಣಿಸಲಾದ ಈ ಚುನಾವಣೆಯಲ್ಲಿ ಐಸೆನ್ಕೋಟ್ ಅವರ ಬೆಳವಣಿಗೆ ಇಸ್ರೇಲ್ ರಾಜಕೀಯದಲ್ಲಿ ಪ್ರಮುಖ ಕ್ಷಣವಾಗಿದೆ.
ಚಾನೆಲ್ 12 ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಐಸೆನ್ಕೋಟ್ ಅವರ ಹೊಸ ಪಕ್ಷವಾದ `ಯಾಶರ್', ನೆತನ್ಯಾಹು ಅವರ ಲಿಕುಡ್ ಪಕ್ಷಕ್ಕಿಂತ ಮುಂದಿದೆ. ಅದೇ ಸಮೀಕ್ಷೆಯಲ್ಲಿ ಶೇಕಡಾ 43 ರಷ್ಟು ಜನರು ಐಸೆನ್ಕೋಟ್ (66) ಪ್ರಧಾನಿ ಹುದ್ದೆಗೆ ಅತ್ಯಂತ ಸೂಕ್ತ ಅಭ್ಯರ್ಥಿ ಎಂದು ಅಭಿಪ್ರಾಯಪಟ್ಟಿದ್ದರೆ, ನೆತನ್ಯಾಹು ಅವರಿಗೆ ಶೇಕಡಾ 34 ರಷ್ಟು ಬೆಂಬಲ ವ್ಯಕ್ತವಾಗಿದೆ.

