HEALTH TIPS

ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ | ಇಶಾ ಸಿಂಗ್‌ಗೆ ಚಿನ್ನ, ಕಂಚಿಗೆ ತೃಪ್ತಿಪಟ್ಟ ಮನು ಭಾಕರ್

ನವದೆಹಲಿ: ಹಾಂಗ್‌ಝೌನಲ್ಲಿ ಸೋಮವಾರ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್(ರೈಫಲ್/ಪಿಸ್ತೂಲ್/ಶಾಟ್‌ಗನ್)ಟೂರ್ನಿಯಲ್ಲಿ ಭಾರತದ ಇಶಾ ಸಿಂಗ್ ಮಹಿಳೆಯರ 25 ಮೀ.ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು.


ಸ್ಪರ್ಧೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ ಇಶಾ ಫೈನಲ್‌ನಲ್ಲಿ 50ರಲ್ಲಿ 40 ಅಂಕ ಗಳಿಸಿ ಪ್ರಾಬಲ್ಯ ಮೆರೆದರು. ಚೀನಾದ ಯು ಝಾಂಗ್ ಎರಡನೇ ಸ್ಥಾನ ಪಡೆದರು.

ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಜಯಿಸಿದ್ದ ಮನು ಭಾಕರ್ ರೋಚಕ ಡಬಲ್ ಶೂಟ್ ಆಫ್‌ನಲ್ಲಿ ಉತ್ತರ ಕೊರಿಯಾದ ಹಿಯೋನ್ ಜಿಯೊಂಗ್ ಪಾಕ್‌ರನ್ನು ಮಣಿಸಿ ಕಂಚಿನ ಪದಕ ಜಯಿಸಿದರು.

ಈ ವರ್ಷಾರಂಭದಲ್ಲಿ ಮ್ಯೂನಿಕ್‌ನಲ್ಲಿ ದಾಖಲೆಯೊಂದಿಗೆ ವಿಶ್ವಕಪ್ ಚಿನ್ನ ಜಯಿಸಿದ್ದ ಇಶಾ ಸಿಂಗ್, ''ಈ ಹಿಂದೆ ನಾನು ಪದಕ ಗೆದ್ದಿರುವ ಕಾರಣ ಈ ಪಂದ್ಯವು ನನಗೆ ಹೆಚ್ಚು ಒತ್ತಡವುಂಟು ಮಾಡಿದೆ. ಇಂದು ನಾನು ಒತ್ತಡವನ್ನು ಮೀರಿ ಪದಕ ಗೆದ್ದಿರುವುದಕ್ಕೆ ತುಂಬಾ ಖುಷಿಯಾಗಿದೆ. ಹಾಂಗ್‌ಝೌನಲ್ಲಿ ಸ್ಪರ್ಧಿಸಲು ನನಗೆ ನಿಜವಾಗಿಯೂ ಸಂತೋಷವಾಗುತ್ತಿದೆ. ಏಶ್ಯನ್ ಗೇಮ್ಸ್‌ನಲ್ಲಿ ಆಡಲು ಉತ್ಸುಕನಾಗಿರುವೆ'' ಎಂದರು.

ಭಾರತದ ಶೂಟರ್‌ಗಳು ಇದೀಗ ಹಾಂಗ್‌ಝೌನಲ್ಲಿ ಒಟ್ಟು ಮೂರು ಪದಕಗಳನ್ನು ಗೆದ್ದಂತಾಗಿದೆ. ಈ ಮೊದಲು ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸೈನ್ಯಮ್ ಬೆಳ್ಳಿ ಪದಕ ಜಯಿಸಿದ್ದರು.

ಭಾರತವು ಇದೀಗ ಪದಕ ಪಟ್ಟಿಯಲ್ಲಿ ಚೀನಾದ ನಂತರ ಎರಡನೇ ಸ್ಥಾನದಲ್ಲಿದೆ. ಚೀನಾವು ಆರು ಚಿನ್ನ ಸಹಿತ ಒಟ್ಟು 14 ಪದಕಗಳನ್ನು ಬಾಚಿಕೊಂಡಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries