HEALTH TIPS

ಗಾಜಾದಲ್ಲಿ ಸಂಪೂರ್ಣ ನಿಶಸ್ತ್ರೀಕರಣ, ಶಾಂತಿ ಒಪ್ಪಂದ: ಡೊನಾಲ್ಡ್ ಟ್ರಂಪ್ ಘೋಷಣೆ

ವಾಷಿಂಗ್ಟನ್: ಗಾಜಾದಲ್ಲಿ ಹಮಾಸ್ ಮತ್ತು ಇತರ ಸಶಸ್ತ್ರ ಗುಂಪುಗಳ ಸಂಪೂರ್ಣ ನಿಶಸ್ತ್ರೀಕರಣಕ್ಕಾಗಿ ಐತಿಹಾಸಿಕ ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಘೋಷಿಸಿದ್ದಾರೆ.


ಈ ಒಪ್ಪಂದವು ಹಂತ ಹಂತವಾಗಿ ಇಸ್ರೇಲ್ ಸೈನ್ಯದ ಹಿಂತೆಗೆತಕ್ಕೆ ಮತ್ತು ಗಾಜಾದಲ್ಲಿ ಹೊಸ ಪ್ಯಾಲೆಸ್ಟೀನ್ ಸರ್ಕಾರದ ರಚನೆಗೆ ದಾರಿ ಮಾಡಿಕೊಡಲಿದೆ ಎಂದು ಅವರು ತಿಳಿಸಿದ್ದಾರೆ.

ಯುದ್ಧದ ನಂತರ ಗಾಜಾದ ಪುನರ್‌ ನಿರ್ಮಾಣ, ಭದ್ರತೆ ಮತ್ತು ಆಡಳಿತವನ್ನು ನಿರ್ವಹಿಸಲು ರಚಿಸಲಾದ ಅಂತರರಾಷ್ಟ್ರೀಯ ಸಂಸ್ಥೆಯಾದ 'ಬೋರ್ಡ್ ಆಫ್ ಪೀಸ್' ಈ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಟ್ರಂಪ್ 'ಟ್ರೂಥ್ ಸೋಶಿಯಲ್' ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಒಪ್ಪಂದದ ಪ್ರಮುಖಾಂಶಗಳು:

ಹಮಾಸ್ ಮತ್ತು ಇತರ ಸಶಸ್ತ್ರ ಗುಂಪುಗಳು ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ತ್ಯಜಿಸುವುದು.

ನಿಶಸ್ತ್ರೀಕರಣ ಪೂರ್ಣಗೊಂಡಂತೆ ಇಸ್ರೇಲಿ ಪಡೆಗಳು ಗಾಜಾದಿಂದ ಹಂತ ಹಂತವಾಗಿ ಹಿಂದೆ ಸರಿಯಲಿವೆ.

ಗಾಜಾದ ನಿವಾಸಿಗಳು ಮತ್ತು ನೆರೆಹೊರೆಯವರ ಸುರಕ್ಷತೆಗಾಗಿ 'ಅಂತರರಾಷ್ಟ್ರೀಯ ಸ್ಥಿರೀಕರಣ ಪಡೆ' ಹಾಗೂ ಹೊಸ ಪ್ಯಾಲೆಸ್ಟೀನ್ ಪೊಲೀಸ್ ಪಡೆ ಜತೆಯಾಗಿ ಕಾರ್ಯನಿರ್ವಹಿಸಲಿವೆ.

ಪ್ಯಾಲೆಸ್ಟೀನ್ ಜನರಿಗೆ ನೆರವಾಗಲು ಮತ್ತು 'ಬೋರ್ಡ್ ಆಫ್ ಪೀಸ್' ಜತೆ ಕೆಲಸ ಮಾಡಲು ಭವಿಷ್ಯದಲ್ಲಿ ಗಾಜಾದಲ್ಲಿ ಹೊಸ ಆಡಳಿತ ವ್ಯವಸ್ಥೆ ಬರಲಿದೆ.

ಇದು ಯುದ್ಧವನ್ನು ಅಂತ್ಯಗೊಳಿಸುವ ಮತ್ತು ಪ್ರದೇಶದಲ್ಲಿ ಸ್ಥಿರತೆಯನ್ನು ತರುವ '20 ಅಂಶಗಳ ಯೋಜನೆ'ಯ ಪ್ರಮುಖ ಭಾಗವಾಗಿದೆ ಎಂದು ಟ್ರಂಪ್ ಬಣ್ಣಿಸಿದ್ದಾರೆ. ಈ ಒಪ್ಪಂದದ ಮಾತುಕತೆಗಳಿಗೆ ಸಹಾಯ ಮಾಡಿದ ಈಜಿಪ್ಟ್, ಕತಾರ್ ಮತ್ತು ಟರ್ಕಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

ಈ ಘೋಷಣೆ ಹೊರತಾಗಿಯೂ ಹಮಾಸ್ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ಗಾಜಾದಲ್ಲಿ ಗುರುವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಆರು ಮಂದಿ ಮೃತಪಟ್ಟಿದ್ದರು ಎಂದು ಪ್ಯಾಲೆಸ್ಟೀನ್ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries