HEALTH TIPS

ಉಗ್ರ ಕೃತ್ಯಗಳ ವಿಡಿಯೊ ತೆಗೆದು ಹಾಕದ ಟೆಲಿಗ್ರಾಂ: ಪ್ರಕರಣ ದಾಖಲಿಸಿದ ಆಸ್ಟ್ರೇಲಿಯಾ

ಮಾಸ್ಕೊ/ಮೆಲ್ಬರ್ನ್‌ : 'ಇಸ್ಲಾಮಿಕ್‌ ಸ್ಟೇಟ್‌ನ ಉಗ್ರರು ಜನರ ಶಿರಚ್ಛೇದ ಮಾಡುತ್ತಿದ್ದ ವಿಡಿಯೊ, ನ್ಯೂಯಾರ್ಕ್‌ನ ಬಫೊಲೊ ನಗರದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಗಳು ಮತ್ತು ನ್ಯೂಜಿಲೆಂಡ್‌ನ ಕ್ರೈಸ್ಟ್‌ ಚರ್ಚ್‌ ಮೇಲಿನ ದಾಳಿಯ ವಿಡಿಯೊಗಳನ್ನು ತೆಗೆದು ಹಾಕುವಂತೆ ನೋಟಿಸ್‌ ನೀಡಿದರೂ ವಿಡಿಯೊಗಳನ್ನು ತೆಗೆದು ಹಾಕಲಾಗಿಲ್ಲ' ಎಂದು ದೂರಿರುವ ಆಸ್ಟ್ರೇಲಿಯಾವು ಟೆಲಿಗ್ರಾಂ ಆಯಪ್‌ ವಿರುದ್ಧ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದೆ.


'ಆಸ್ಟ್ರೇಲಿಯಾ ನ್ಯಾಯಾಲಯದಲ್ಲಿ ಟೆಲಿಗ್ರಾಂ ವಿರುದ್ಧ ತೀರ್ಪು ಬಂದರೆ, ಕಂಪನಿಯು 38 ದಶಲಕ್ಷ ಡಾಲರ್‌ (ಸುಮಾರು ₹363 ಕೋಟಿ) ದಂಡ ಪಾವತಿಸಬೇಕಾಗುತ್ತದೆ' ಎಂದು ಆನ್‌ಲೈನ್‌ ಸುರಕ್ಷತೆಯ ಮೇಲ್ವಿಚಾರಣೆ ನಡೆಸುವ ಇಲ್ಲಿನ ಇಸೇಫ್ಟಿ ಕಮಿಷನರ್‌ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಟೆಲಿಗ್ರಾಂ, '2026ರಲ್ಲಿಯೇ ಭಯೋತ್ಪಾದನೆ ಸಂಬಂಧಿತ ಸುಮಾರು 1.50 ಲಕ್ಷ ಗುಂಪುಗಳನ್ನು ಬ್ಲಾಕ್‌ ಮಾಡಲಾಗಿದೆ' ಎಂದಿದೆ.

'ಭಯೋತ್ಪಾದನೆಗೆ ಸಹಕಾರ ನೀಡುತ್ತಿದ್ದಾರೆ' ಎಂದು ಆರೋ‍ಪಿಸಿರುವ ರಷ್ಯಾ, ಪಾವೆಲ್‌ ಅವರನ್ನು ಬುಧವಾರ ವಾಂಟೆಡ್‌ ಪಟ್ಟಿ ಸೇರಿಸಿದೆ. ಈ ಹಿಂದೆ, 'ಹಣ ಅಕ್ರಮ ವರ್ಗಾವಣೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೊಗಳ ಹಂಚಿಕೆಗಾಗಿ ಟೆಲಿಗ್ರಾಂ ಆಯಪ್‌ ಅನ್ನು ಬಳಸಿಕೊಳ್ಳಲಾಗುತ್ತದೆ' ಎಂದು ಫ್ರಾನ್ಸ್‌ ಸೇರಿದಂತೆ ಐರೋಪ್ಯ ದೇಶಗಳು ಮತ್ತು ರಷ್ಯಾ ಆರೋಪಿಸುತ್ತಲೇ ಬಂದಿವೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries