HEALTH TIPS

ನಿಮ್ಮ ಹಿಂದೂ ಪತ್ನಿಯೂ ಹಾಗೇನಾ?: ಜೆ.ಡಿ. ವ್ಯಾನ್ಸ್ ಹೇಳಿಕೆಗೆ ನೆಟ್ಟಿಗರ ಆಕ್ರೋಶ

 ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಇವರು ಇತ್ತೀಚೆಗೆ ನೀಡಿದ ಹೇಳಿಕೆಯೂಂದು ಭಾರಿ ವಿವಾದಕ್ಕೆ ಕಾರಣವಾಗಿದೆ. 


ತಮ್ಮ ಕ್ಯಾಥೋಲಿಕ್ ಧರ್ಮದ ನಂಬಿಕೆಗಳು 'ಕಡಿಮೆ ವೇತನದ ವಿದೇಶಿಯರು' ದೇಶದೊಳಗೆ ಬರುವುದನ್ನು ವಿರೋಧಿಸಲು ಪ್ರೇರಿಪಿಸುತ್ತದೆ ಎಂದು ಅವರು ಹೇಳಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವ್ಯಾನ್ಸ್ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಖಂಡನೆ ವ್ಯಕ್ತವಾಗಿದೆ. ವ್ಯಾನ್ಸ್ ಅವರ ಪತ್ನಿ ಉಷಾ ವ್ಯಾನ್ಸ್ ಭಾರತೀಯ ಮೂಲದ ಹಿಂದೂ ಧರ್ಮದವರಾಗಿರುವುದನ್ನು ನೆನಪಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

'ಫಾಕ್ಸ್ ನ್ಯೂಸ್' ಸಂವಾದದಲ್ಲಿ ವ್ಯಾನ್ಸ್ ಈ ಕುರಿತು ಪ್ರಸ್ತಾಪಿಸಿದ್ದರು. ನಮ್ಮ ಧರ್ಮವು ನನಗೆ ವಿನಯವಂತಿಕೆಯನ್ನು ಕಲಿಸುತ್ತದೆ. ನಮ್ಮ ಆರ್ಥಿಕ ನೀತಿಗಳು ಕೇವಲ ಕಾರ್ಪೋರೇಟ್ ಸಂಸ್ಥೆಗಳಿಗೆ ಅಥವಾ ವಾಲ್ ಸ್ಟ್ರೀಟ್‌ಗಾಗಿ ಅಲ್ಲ. ಅವು ಮಾನವನ ಘನತೆಯನ್ನು ಎತ್ತಿ ಹಿಡಿಯಬೇಕು ಎಂದಿದ್ದಾರೆ.

ಮಾತು ಮುಂದುವರಿಸಿದ ಅವರು ಅಮೆರಿಕದ ನಾಗರಿಕರು ಗೌರವಯುತ ಜೀವನ ನಡೆಸಬೇಕೆಂದು ನಾವು ಬಯಸುತ್ತೇವೆ. ಅದಕ್ಕಾಗಿಯೇ ಕಡಿಮೆ ವೇತನದ ವಿದೇಶಿಯರು ಇಲ್ಲಿಗೆ ಬಂದು ಅಮೆರಿಕದ ಕಾರ್ಮಿಕರ ವೇತನದ ಮೌಲ್ಯವನ್ನು ಕುಗ್ಗಿಸಲು ಬಯಸುವುದಿಲ್ಲ. ಇದು ಕ್ರೈಸ್ತರ ನಂಬಿಕೆಯಾಗಿದೆ ಎಂದು ಹೇಳಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ನೆಟ್ಟಿಗರು, ಯೇಸು ಕ್ರಿಸ್ತರು ಬಡವರನ್ನು ಆಶೀರ್ವದಿಸಿದ್ದಾರೆ. ಅವರು ಸಹ ಕಡಿಮೆ ವೇತನದ ವಿದೇಶಿಯಾಗಿದ್ದಾರೆ. ಇನ್ನು ಕೆಲವು ಜೆ.ಡಿ. ವ್ಯಾನ್ ವೈಯಕ್ತಿಕ ಜೀವನವನ್ನು ಪ್ರಸ್ತಾಪಿಸಿ ಹಾಗಾದರೆ ನಿಮ್ಮ ಹಿಂದೂ ಪತ್ನಿ ಉಷಾ ಅವರ ಕಥೆಯೇನು ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ 'ತಮ್ಮ ಪತ್ನಿ, ಅಮೆರಿಕದ ಎರಡನೆಯ ಮಹಿಳೆ ಉಷಾ ವ್ಯಾನ್ಸ್‌ ಕ್ರಿಶ್ಚಿಯನ್‌ ಅಲ್ಲ. ಆಕೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವ ಯಾವುದೇ ಯೋಜನೆ ಇಲ್ಲ' ಎಂದು ಜೆ.ಡಿ.ವ್ಯಾನ್ಸ್‌ ಹೇಳಿಕೆ ನೀಡಿದ್ದರು.

ಟ್ರಂಪ್‌ ಆಡಳಿತವು ವಲಸೆ ನೀತಿಗಳಲ್ಲಿ ಬದಲಾವಣೆ ತಂದ ಬೆನ್ನಲ್ಲೇ, ಉಷಾ ವ್ಯಾನ್ಸ್‌ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ ಎಂಬ ಚರ್ಚೆ ಮುನ್ನೆಲೆಗೆ ಬಂದಿತ್ತು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries