ಟೆಹರಾನ್: ಅಮೆರಿಕವನ್ನು 'ಗ್ರೇಟ್ ಸೈತಾನ' ಎಂದು ಕರೆದಿರುವ ಇರಾನ್‌ನ ಉತ್ತರಾಧಿಕಾರಿ ಮೊಜ್ತಬಾ ಖಮೇಮಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಗೆ ಯಾವುದೇ ಬೆಲೆ ಇಲ್ಲ ಎಂದು ಹೇಳಿದ್ದಾರೆ.
ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು 14 ಅಂಶಗಳ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದವು.
ಒಂದು ವೇಳೆ ಅಮೆರಿಕ ದಾಳಿಯನ್ನು ಮುಂದುವರಿಸಿದರೆ, ಎಂದಿಗೂ ಮರೆಯಲಾಗದ ಪಾಠ ಕಲಿಸುವುದಾಗಿ ಖಮೇನಿ ಎಚ್ಚರಿಕೆ ನೀಡಿದ್ದಾರೆ.
ಇರಾನ್ ದೇಶವನ್ನು ಉದ್ದೇಶಿಸಿ ಸಂದೇಶ ರವಾನಿಸಿರುವ ಖಮೇನಿ, 'ಅಮೆರಿಕ ಪದೇ ಪದೇ ಒಪ್ಪಂದಗಳ ನಿಯಮವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು. ಇದರಿಂದ ಅಮೆರಿಕದ ನೈಜ ಬಣ್ಣ ಬಯಲಾಗಿದೆ' ಎಂದು ಹೇಳಿದ್ದಾರೆ.
'ಒಪ್ಪಂದವನ್ನು ಉಲ್ಲಂಘಿಸುವ ಹೇಳೆ ಚಾಳಿಯನ್ನು ಅಮೆರಿಕ ಮುಂದುವರಿಸಿದೆ. ಇದರಿಂದಾಗಿ ಅಮೆರಿಕ ಅಧ್ಯಕ್ಷರ ಸಹಿಗೆ ಯಾವುದೇ ನಂಬಿಕೆ ಅಥವಾ ಮಾನ್ಯತೆ ಇಲ್ಲ ಎಂಬುದು ಸಾಬೀತಾಗಿದೆ. ಸರ್ವಾಧಿಕಾರ ಹಾಗೂ ಕ್ರೌರ್ಯವೇ ಅಮೆರಿಕದ ಸಿದ್ಧಂತವಾಗಿದೆ' ಎಂದು ಟೀಕಿಸಿದ್ದಾರೆ.
'ಅಮೆರಿಕವು ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿದೆ. ಹಾಗಾಗಿ ಅದು ಹೆಚ್ಚಿನ ನಷ್ಟವನ್ನು ಭರಿಸಲು ಸಿದ್ಧವಾಗಬೇಕಿದ್ದು, ಮರೆಯಲಾರದ ಪಾಠವನ್ನು ಇರಾನ್ ಕಲಿಸಲಿದೆ 'ಎಂದು ಎಚ್ಚರಿಸಿದ್ದಾರೆ.
ಇರಾನ್‌ನ ಮಿಲಿಟರಿ ಹಾಗೂ ನಾಗರಿಕ ನೆಲೆಗಳನ್ನು ಗುರಿಯಾಗಿಸಿ ಅಮೆರಿಕ ನಿರಂತರ ದಾಳಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಮಿಲಿಟಲಿ ನೆಲೆಗಳನ್ನು ಗುರಿಯಾಗಿಸಿ ಇರಾನ್ ಪ್ರತಿದಾಳಿ ನಡೆಸುತ್ತಿದೆ. ಇದರಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಅನಿಶ್ಚಿತತೆ ಮುಂದುವರಿದಿದೆ.

