ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ವಠಾರದಲ್ಲಿ ಎರಡುತಂಡಗಳ ಮಧ್ಯೆ ನಡೆದ ಘಷರ್ಚಣೆಗೆ ಸಂಬಂಧಿಸಿ ಮೂರು ಮಂದಿಯನ್ನು ಕಾಸರಗೋಡು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯುವಕರ ತಂಡವೊಂದು ಗುಂಪುಸೇರಿ ಘರ್ಷಣೆಯಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಪಡೆದ ನಗರ ಠಾಣೆ ಇನ್‍ಸ್ಪೆಕ್ಟರ್ ಡಿ. ನಳಿನಾಕ್ಷನ್ ನೇತೃತ್ವದ ಪೆÇಲೀಸ್ ತಂಡ ಕಾರ್ಯಾಚರಣೆ ನಡೆಸಿದೆ.
ಬೋವಿಕಾನ ಕೋಟೂರು ನಿವಾಸಿ ಕೆ. ಅನಿಲ್ ಕುಮಾರ್ (38), ಆಡೂರು ಕುಂಟಾರು ಮಿಂಚಿಪದವು ಹೌಸ್‍ನ ಎಂ. ನಿದಿನ್‍ರಾಜ್ (24), ಪಾತ್ಸದ್ಯ ಹೌಸ್‍ನ ಲಿನೀಶ್ ಕುಮಾರ್ (41) ಬಂಧಿತರು. ನಂತರ ಇವರನ್ನು ನೋಟೀಸ್ ನೀಡಿ ಬಿಡುಗಡೆಗೊಳಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ನಡೆಸಿದ ಹಾಗೂ ಗುಂಪು ಸೇರಿ ಕಾನೂನು ಉಲ್ಲಂಘಿಸಿದ ಇತರ 10 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

