ಕಾಸರಗೋಡು: ಮದ್ಯ ಸೇವಿಸಿ ಅಪಾಯಕರ ರೀತಿಯಲ್ಲಿ ವಾಹನ ಚಲಾಯಿಸಿದ ಸೋಶಿಯಲ್ ಮೀಡಿಯಾ ಇನ್‍ಫ್ಲುಯೆನ್ಸರ್ ಧನ್ಯಾಳ ಡ್ರೈವಿಂಗ್ ಲೈಸನ್ಸ್ ಅಮಾನತುಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಮಂಗಳವಾರ ಯುವತಿ ಮದ್ಯ ಸೇವಿಸಿ ಚಲಾಯಿಸುತ್ತಿದ್ದ ಕಾರನ್ನು ಪೆÇಲೀಸರು ವಶಪಡಿಸಿದ್ದರು. ಅಣಂಗೂರಿನ ರಾಷ್ಟ್ರೀಯ ಹೆದ್ದಾರಿ ಅಂಚಿಗೆ ನಿಲ್ಲಿಸಿದ್ದ ಕಾರನ್ನು ತಪಾಸಣೆ ನಡೆಸಲು ಪೆÇಲೀಸರು ತಲುಪಿದಾಗ ಕಾರನ್ನು ತಕ್ಷಣ ಅತಿಯಾದ ವೇಗದಲ್ಲಿ ಚಲಾಯಿಸಿ ಪರಾರಿಯಾಗಲು ಯತ್ನಿಸಿದ್ದಳು. ಬಳಿಕ ಕುಂಬಳೆ ಪೆÇಲೀಸ್ ಇನ್‍ಸ್ಪೆಕ್ಟರ್ ನೇತೃತ್ವದ ಪೆÇಲೀಸ್ ತಂಡ ಕಾರನ್ನು ಹಿಂಬಾಲಿಸಿ ಬಂದ್ಯೋಡು ಅಡ್ಕ ಭಗವತಿ ನಗರದಲ್ಲಿ ತಡೆದು ನಿಲ್ಲಿಸಿ, ಕಾರನ್ನು ಪರಿಶೀಲಿಸಿದಾಗ ಧನ್ಯ ಡ್ರೈವಿಂಗ್ ಸೀಟ್‍ನಲ್ಲಿದ್ದಳು. ಅನಂತರ ನಡೆಸಿದ ಬ್ರೀತ್ ಅನಲೈಸರ್ ತಪಾಸಣೆ ವೇಳೆ ಈಕೆ ಮದ್ಯ ಸೇವಿಸಿರುವುದು ಖಚಿತಗೊಂಡಿತ್ತು. ಮದ್ಯ ಸೇವಿಸಿ, ನಿರ್ಲಕ್ಷ್ಯವಾಗಿ ಮನುಷ್ಯ ಜೀವಕ್ಕೆ ಅಪಾಯವುಂಟುಮಾಡುವ ರೀತಿಯಲ್ಲಿ ವಾಹನ ಚಲಾಯಿಸಿದ ಧನ್ಯಾಳಿಗೆ ಪೆÇಲೀಸರು ನೋಟೀಸ್ ನೀಡಿದ್ದರು. ಟಿಕ್‍ಟಾಕ್ ವಿಡಿಯೋ ಮೂಲಕ ಗಮನ ಸೆಳೆದಿದ್ದ ಧನ್ಯ ಟಿಕ್‍ಟಾಕ್ ನಿಷೇಧಿಸಿದ ಬಳಿಕ ಇನ್‍ಸ್ಟಾಗ್ರಾಂ ರೀಲ್ಸ್‍ಗಳಲ್ಲಿ ಸಕ್ರಿಯಳಾಗಿದ್ದಳು.

