ಕಾಸರಗೋಡು: ಆಪರೇಶನ್ ತೂಫಾನ್ ಅನ್ವಯ ಚಂದೇರ ಠಾಣೆ ಪೆÇಲೀಸರು ಕೃಷ್ಣಪುರದಲ್ಲಿ ನಡೆಸಿದ ದಾಳಿಯಲ್ಲಿ 1.20 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ. ಮಾಡಕ್ಕಲ್ ನಿವಾಸಿ ಎಂ.ಕೆ. ಮುನೀರ್ (39) ಹಾಗೂ ತಯ್ಯನ್ನೂರು ಕವ್ವಾಯಿ ನಿವಾಸಿ ಮೊಹಮ್ಮದ್ ಸಾಜಿದ್ (35) ಎಂಬವರು ಬಂಧಿತರು.
ಠಾಣೆ ಎಸ್.ಐ ಎಂ. ಅಬ್ದುಲ್ ನೇತೃತ್ವದ ಪೊಲೀಸರ ತಂಡ ಕೃಷ್ಣಪುರ ಶಾಬೋ ಶೆಟ್ಟಿ ರಸ್ತೆ ಜಂಕ್ಷನ್‍ನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಬುಲೆಟ್‍ನಲ್ಲಿ ಸಂಚರಿಸುತ್ತಿದ್ದ ಆರೋಪಿಗಳು, ಪೆÇಲೀಸರನ್ನು ಕಂಡು ಪರಾರಿಯಾಗಲು ಯತ್ನಿಸುತ್ತಿದ್ದಂತೆ, ಪೆÇಲೀಸರು ಇವರನ್ನು ಹಿಂಬಾಲಿಸಿ ಸೆರೆ ಹಿಡಿದಿದ್ದಾರೆ. ಬಳಿಕ ನಡೆಸಿದ ದೇಹ ತಪಾಸಣೆಯಲ್ಲಿ ಮುನೀರ್‍ನ ಪ್ಯಾಂಟ್‍ನ ಜೇಬಿನಿಂದ ಎಂಡಿಎಂಎ ಹಾಗೂ 1300 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಸ್ವಂತ ಉಪಯೋಗ ಹಾಗೂ ಮಾರಾಟಕ್ಕಾಗಿ ಎಂಡಿಎಂಎ ತಂದಿರುವುದಾಗಿ ಆರೋಪಿಗಳು ಪೆÇಲೀಸರಲ್ಲಿ ತಿಳಿಸಿದ್ದಾರೆ. ಬಂಧಿತ ಎಂ.ಕೆ ಮುನೀರ್ ತಳಿಪರಂಬದ ಎಂಡಿಎಂಎ ವಶಪಡಿಸಿದ ಪ್ರಕರಣದಲ್ಲೂ ಶಾಮೀಲಾಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.



