HEALTH TIPS

ಸಿಐಟಿಯು ಜಿಲ್ಲಾ ಸಮಿತಿಯಿಂದ ಮಾಜಿ ಶಾಸಕ ರಾಘವನ್ ಸಂಸ್ಮರಣೆ

ಕಾಸರಗೋಡು: ಸಿಐಟಿಯು ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಾಜಿ ಶಾಸಕ, ಕಾಮ್ರೇಡ್ ಪಿ. ರಾಘವನ್ ಸಂಸ್ಮರಣಾ ಸಮಾರಂಭ ಕಾಸರಗೋಡಿನ ಚಂದ್ರಗಿರಿ ಜಂಕ್ಷನ್‍ನಲ್ಲಿರುವ ಪಬ್ಲಿಕ್ ಸವೆರ್ಂಟ್ ಸಭಾಂಗಣದಲ್ಲಿ ಜರುಗಿತು. 


ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ  ಟಿ.ಕೆ. ರಾಜನ್ ಧ್ವಜಾರೋಹಣ ನಡೆಸಿ,  ಸಮಾರಂಭ  ಉದ್ಘಾಟಿಸಿದರು.   ಡಾ. ವಿ.ಪಿ.ಪಿ. ಮುಸ್ತಫಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ, ಟಿ.ಎಂ.ಎ. ಕರೀಂ, ಯು. ತಂಬಾನ್ ನಾಯರ್, ಬೇಬಿ ಶೆಟ್ಟಿ, ಗಿರಿ ಕೃಷ್ಣನ್ ಮತ್ತು ಪಿ. ಬಾಲಕೃಷ್ಣನ್, ಶಾಂತಾ ಕುಮಾರಿ ಬಿ., ಶೋಭಾ, ಪಿ.ಎ. ರೆಹಮಾನ್, ಟಿ. ನಾರಾಯಣನ್, ಕೆ. ರವೀಂದ್ರನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮಣಿಮೋಹನನ್ ಮೊದಲಾದವರು  ಉಪಸ್ಥಿತರಿದ್ದರು. ಕೆ. ರವೀಂದ್ರನ್ ಸ್ವಾಗತಿಸಿದರು. ಎ. ನಾರಾಯಣನ್ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries