ಕಾಸರಗೋಡು: ಸರ್ಕಾರದ ಆಡಳಿತ ಸಾಧನೆಗಳನ್ನು ಮರೆಮಾಚಿ, ಅದರ ನೀತಿಗಳನ್ನು ತಿರುಚಿ ಜನರಿಗೆ ತಪ್ಪು ಸಂದೇಶ ನೀಡುವ ಎಡಪಂಥೀಯ ಸಂಘಟನೆಗಳ ಯತ್ನವನ್ನು ಸಂಘಟಿತ ಪ್ರಯತ್ನದಿಂದ ಎದುರಿಸಲಾಗುವುದು ಎಂದು ಪ್ರಜಾಪ್ರಭುತ್ವ ಪರ ಶಿಕ್ಷಕ-ಸೇವಾ ಸಂಘಟನೆಗಳ ಒಕ್ಕೂಟ ಯು.ಟಿ.ಇ.ಎಫ್ ಜಿಲ್ಲಾ ನಾಯಕತ್ವ ಸಭೆ ಅಭಿಪ್ರಯಪಟ್ಟಿದೆ.
ಎನ್‍ಜಿಒ ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ಸುರೇಶ್ ಪೆರಿಯಂಗಾನಂ ಉದ್ಘಾಟಿಸಿದರು. ಯು.ಟಿ.ಇ.ಎಫ್ ಜಿಲ್ಲಾ ಅಧ್ಯಕ್ಷ ಲೋಕೇಶ್ ಎಂ.ಬಿ. ಆಚಾರ್ ಅಧ್ಯಕ್ಷತೆ ವಹಿಸಿದ್ದರು.
ಟಿ. ಅಬ್ದುಲ್ ಗಫೂರ್, ಕೆ. ಗೋಪಾಲಕೃಷ್ಣನ್, ಡಾ. ಕೆ.ವಿ. ಪ್ರಮೋದ್, ಜೆ. ರಾಜೀವನ್, ಯಾಸರ್ ಅರಾಫತ್, ವಿ.ಪಿ. ಯೂಸುಫ್, ವಿ.ಟಿ.ಪಿ. ರಾಜೇಶ್, ಟಿ.ಕೆ. ಇಕ್ಬಾಲ್, ಎ. ಹಸೈನಾರ್, ವಿ.ಎಂ. ರಾಜೇಶ್, ಸಮೀರ್ ತೆಕ್ಕಿಲ್, ಸತ್ತಾರ್ ಆತವನಾಡ್, ಆರ್.ವಿ. ಪ್ರೇಮಾನಂದನ್, ಸಿ. ಸುನಿಲ್ ಕುಮಾರ್ ಮೊದಲಾದವರುಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ಒ.ಎಂ. ಶೆಫೀಕ್ ಸ್ವಾಗತಿಸಿದರು. ಗಿರೀಶ್ ಆನಪೆಟ್ಟಿ ವಂದಿಸಿದರು.

