ಕಾಸರಗೋಡು: ಕಣ್ಣೂರು ಮಟ್ಟನ್ನೂರಿನಲ್ಲಿ ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಉಪಯೋಗಿಸಿ ಪ್ರಶ್ನೆಗೆ ಉತ್ತರ ಬರೆದ ಪೈವಳಿಕೆ ಪಂಚಾಯಿತಿ ಕುರುಡಪದವು ಸಾದಂಗಯ ನಿವಾಸಿ ಎಸ್. ಜನಾರ್ದನ (36)ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೆಎಸ್‍ಇಬಿಯಲ್ಲಿ ಅರೆಕಾಲಿಕ ಉದ್ಯೋಗಿಯಾಗಿದ್ದ ಈತ ವರ್ಕಾಡಿ ಸೆಕ್ಷನ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದನು. ಈ ಮಧ್ಯೆ ಕಾಯಂ ಹುದ್ದೆಗಾಗಿ ಜುಲೈ 1 ರಂದು ಕಣ್ಣೂರಿನ ಮಟ್ಟನ್ನೂರಿನ ಪೆÇೀಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕೇರಳ ಸರ್ಕಾರಿ ಸರ್ಕಿಫಿಕೇಟ್ ಎಕ್ಸಾಮ್(ಕೆಜಿಸಿಇ)ಗೆ ಹಾಜರಾಗಿದ್ದ ಈತ ಮೊಬೈಲ್ ನೋಡಿ ಉತ್ತರ ಬರೆಯುತ್ತಿರುವ ಬಗ್ಗೆ ಪರೀಕ್ಷಾ ಜವಾಬ್ದಿರಿ ಹೊಂದಿದ್ದ ಸೂಪರ್‍ವೈಸರ್ ನೀಡಿದ ಮಾಹಿತಿಯನ್ವಯ ಕೂತುಪರಂಬ ಎಸಿಪಿ ಸಿಬಿ ಟೋಮ್ ನೇತೃತ್ವದ ಪೆÇಲೀಸ್ ತಂಡ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪರೀಕ್ಷೆಯ ಪೂರ್ವಭಾವಿಯಾಗಿ ಪರೀಕ್ಷಾ ಯೋಗ್ಯತಾ ತರಬೇತಿಯಲ್ಲಿ ಪಾಲ್ಗೊಂಡಿದ್ದ ಜನಾರ್ದನಗೆ ತರಬೇತಿ ನೀಡುವ ಸಂಸ್ಥೆಯ ಶಿಕ್ಷಕ ವಡಗರ ನಿವಾಸಿ ಸುರೇಶ್‍ಬಾಬು ಎಂಬಾತ ಮೊಬೈಲಲ್ಲಿ ಪರೀಕ್ಷೆಗೆ ಸಂಬಂಧಿಸಿದ ಉತ್ತರ ರವಾನಿಸಿದ್ದನೆನ್ನಲಾಗಿದೆ. ಜನಾರ್ದನನನ್ನು ಸೆರೆಹಿಡಿಯುತ್ತಿದ್ದಂತೆ ಸುರೇಶ್‍ಬಾಬು ತಲೆಮರೆಸಿಕೊಂಡಿದ್ದಾನೆ. ಸುರೇಶ್‍ಬಾಬು ಎಡ್ಮಿನ್ ಆಗಿರುವ ತಾತಾಲಿಕ ನೌಕರರ ವಾಟ್ಸಪ್ ಗ್ರೂಪ್ ಮೂಲಕ ಉತ್ತರ ಒದಗಿಸಲಾಗಿತ್ತು. ಜನಾರ್ದನನ ಹೊರತಾಗಿ 21ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇವರಿಗೂ ಉತ್ತರ ರವಾನೆಯಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



