HEALTH TIPS

ಮನೆಯಿಂದ ಕಳವಾಗಿದ್ದ ಚಿನ್ನಾಭರಣ ಮನೆ ವಠಾರದಿಂದ ಪತ್ತೆ!

ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕಯ್ಯಾರಿನ ಮನೆಯಿಂದ ಕಾಣೆಯಾಯಾಗಿದ್ದ ಐದು ಪವನು ಚಿನ್ನವನ್ನು ಅದೇ ಮನೆ ವಠಾರದಿಂದ ಪತ್ತೆಹಚ್ಚಲಾಗಿದೆ. ಪಾಲಕ್ಕಾಡಿನಲ್ಲಿ ಹೋಟೆಲ್ ವ್ಯಾಪಾರಿಯಾಗಿರುವ ಯೂಸಫ್ ಎಂಬವರ ಮನೆಯಿಂದ ಭಾನುವಾರ ರಾತ್ರಿ 5 ಪವನ್ ಚಿನ್ನಾಭರಣ ಕಳವಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಮಧ್ಯೆ ಚಿನ್ನ ಪತ್ತೆಯಾಗಿದೆ.   

ಯೂಸಫ್ ಅವರ ಪತ್ನಿ, ಹಾಗೂ ಮೂವರು ಮಕ್ಕಳು  ಮನೆಯಲ್ಲಿ ವಾಸವಿದ್ದು, ಭಾನುವಾರ ಸಂಜೆ 7.30ಕ್ಕೆ ಮನೆ ಸನಿಹದ ಮಸೀದಿಗೆ ಪ್ರಾರ್ಥನೆಗಾಗಿ ತೆರಳಿದ್ದರು. ಅಲ್ಲಿಂದ   ರಾತ್ರಿ 8.30ರ ವೇಳೆ ವಾಪಾಸುಬರುವಾಗ ಮನೆಗೆ ಕಳ್ಳರು ನುಗ್ಗಿರುವುದು ಅರಿವಿಗೆ ಬಂದಿತ್ತು. ಬೆಡ್‍ರೂಮಿನ ಕಪಾಟು ತೆರೆದಿಟ್ಟ ಸ್ಥಿತಿಯಲ್ಲಿದ್ದು, ಅದನ್ನು ಪರಿಶೀಲಿಸಿದಾಗ ಚಿನ್ನಾಭರಣ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿತ್ತು. ಒಟ್ಟು 10 ಪವನ್ ಚಿನ್ನಾಭರಣದಲ್ಲಿ 5 ಪವನ್ ಬಟ್ಟೆಗಳ ಸಂದಿಯಲ್ಲಿದ್ದರೆ,  ಉಳಿದ 5 ಪವನ್ ನಾಪತ್ತೆಯಾಗಿತ್ತು.   ಕುಂಬಳೆ ಠಾಣೆ ಇನ್‍ಸ್ಪೆಕ್ಟರ್ ಬೈಜು ಕೆ ಜೋಸ್, ಎಸ್.ಐ ಗಣೇಶನ್ ಹಾಗೂ ಶ್ವಾನದಳ, ಫಾರೆನ್ಸಿಕ್ ತಂಡ ತಲುಪಿ ತಪಾಸಣೆ ನಡೆಸುತ್ತಿದ್ದ ವೇಳೆ ಮನೆ ಪರಿಸರದಿಂದ 5 ಪವನ್ ಚಿನ್ನಾಭರಣ ಪತ್ತೆಯಾಗಿದೆ. ಈ ಬಗ್ಗೆ  ಪೆÇಲೀಸರು ತನಿಖೆ ತೀವ್ರಗೊಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries