ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‍ಟಿಪಿ ರಸ್ತೆಯ ಕುಂಬಳೆ ಶಾಂತಿಪಳ್ಳ ಸನಿಹದ ಭಾಸ್ಕರ ನಗರದಲ್ಲಿ ಕಾರು ಪಲ್ಟಿಯಾಗಿ ಕಾರಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಕಾರು ಪ್ರಯಾಣಿಕರಾದ ಕಳತ್ತೂರು ಉಳುವಾರು ನಿವಾಸಿ ಮುಹಮ್ಮದ್, ಪತ್ನಿ ಮರಿಯಮ್ಮ, ಪುತ್ರ ಜಲೀಲ್ ಗಾಯಾಳುಗಳು. ಇವರನ್ನು ನಾಗರಿಕ ಸಹಾಯದಿಂದ ಕುಂಬಳೆ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂಬಳೆಯಿಂದ ನಾಯ್ಕಾಪು ಕಡೆಗೆ ತೆರಳುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದೆ. ಕೆಎಸ್‍ಟಿಪಿ ರಸ್ತೆ ಅಭಿವೃದ್ಧಿಗೊಂಡ ನಂತರ ಈ ಪ್ರದೇಶದಲ್ಲಿ ಹಲವು ಅಪಘಾತಗಳು ನಡೆದಿದ್ದು, ಇಲ್ಲಿ'ಅಪಘಾತ ವಲಯ' ಎಂಬ ಸೂಚನಾ ಫಲಕ ಹಾಕಿ ರಸ್ತೆಯಲ್ಲಿ ವೇಗ ನಿಯಂತ್ರಕ ಅಳವಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

