ಕಾಸರಗೋಡು: ಬಾಲಭವನ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಮಹಾಸಭೆ ಶಾಲೆಯಲ್ಲಿ ಜರುಗಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗುರುದತ್ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಸಮಗ್ರ ಅಭಿವೃದ್ಧಿಗೆ ಮಕ್ಕಳ ಪೆÇೀಷಕರ ಸಹಾಯ ಸಹಕಾರ ಅಗತ್ಯ ಎಂದು ತಿಳಿಸಿದರು.
ಮಿತಿಯನ್ನು ಶಾಲಾ ಸಮಿತಿ ಕಾರ್ಯದರ್ಶಿ ಲೀಲಾವತಿ ನಾಯರ್, ಶಾಲಾ ಅಕಾಡಮಿಕ್ ನಿರ್ದೇಶಕ ಸಮಿತಿಯ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು. ಸುಜಾತ ಟೀಚರ್ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಶ್ರೀ ಪ್ರಕಾಶ್ ಲೆಕ್ಕಪತ್ರ ಮಂಡಿಸಿದರು. 2026-28 ಸಾಲಿನ ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಮೊಹಮ್ಮದ್ ಅಸ್ಲಾಂ ಅಧ್ಯಕ್ಷ, ಸೀಬಾ ಉಪಾಧ್ಯಕ್ಷೆ, ದೀಪ್ತಿ ಟೀಚರ್ ಜತೆ ಕಾರ್ಯದರ್ಶಿ, ಪೌಲೋಸ್ ಕೋಶಾಧಿಕಾರಿ ಹಾಗೂ 14 ಮಂದಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು. ರಾಧಾ ಟೀಚರ್ ವಂದಿಸಿದರು.

