HEALTH TIPS

ಕರ್ನಾಟಕ -ಗಡಿನಾಡು ಕನ್ನಡ ಸಮ್ಮೇಳನ: ಡಾ. ಸಿ. ಸೋಮಶೇಖರ್ ಸರ್ವಾಧ್ಯಕ್ಷರಾಗಿ ಆಯ್ಕೆ

ಕಾಸರಗೋಡು: ನಗರದ ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದ ರಜತ ಸಂಭ್ರಮ -ಸಮಾರೋಪ ಸಮಾರಂಭ ಜುಲೈ 26ರಂದು ಕನ್ನಡ ಭವನದ "ಡಾ. ಲಲಿತಾ ಎಸ್. ಏನ್ ಭಟ್ "ವೇದಿಕೆಯಲ್ಲಿ ನಡೆಯಲಿದೆ.  ಈ ಸಂದರ್ಭ ಆಯೋಜಿಸಲಾಗಿರುವ"ಕರ್ನಾಟಕ -ಗಡಿನಾಡು ಕನ್ನಡ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ ಸೋಮಶೇಖರ್ ಐ. ಎ. ಎಸ್. ಅವರನ್ನು ಆಯ್ಕೆ ಮಾಡಲಾಗಿದೆ.   


ಸಮ್ಮೇಳನದಲ್ಲಿ 50 ವಿವಿಧ ಸಂಘಟನೆಗಳ ರೂವಾರಿಗಳಿಗೆ ಹಾಗೂ ಸುಮಾರು 50 ಮಂದಿ ಕನ್ನಡ ಸಾಹಿತಿ, ಕವಿ, ವಿದ್ವಾಂಸರುಗಳಿಗೆ ಪ್ರಶಸ್ತಿ ನೀಡಲಾಗುವುದು. ಈ ಸಮ್ಮೇಳನದಲ್ಲಿ ಕರ್ನಾಟಕದ ವಿವಿಧ ಸಾಂಸ್ಕøತಿಕ ಕಲಾ ಸಂಪತ್ತಿನ ಪ್ರದರ್ಶನ,  ಸರ್ವಾಧ್ಯಕ್ಷರನ್ನೊಳಗೊಂಡ ಕನ್ನಡ ಮೆರವಣಿಗೆ, ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವುದು.  

ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಅವರ ದಿವ್ಯಉಪಸ್ಥಿತಿ ಹಾಗೂ ಆಶೀರ್ವಚನ ಇರಲಿರುವುದಾಗಿ ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries