ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿಯ 2024-25 ವಾರ್ಷಿಕ ಯೋಜನೆಯಲ್ಲಿ ಒಳಪಡಿಸಿಕೊಂಡು ಪಂಚಾಯಿತಿಯಲ್ಲಿರುವ ಹಸಿರು ಕ್ರಿಯಾಸೇನೆ ಕಾರ್ಯಕರ್ತರಿಗೆ ರೈನ್ ಕೋಟ್ ವಿತರಣೆಯ ಉದ್ಘಾಟನೆಯು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ವಿತರಣೆ ಉದ್ಘಾಟನೆಯನ್ನು ಪಂಚಾಯಿತಿ ಅಧ್ಯಕ್ಷೆ ಯಶೋಧಾ ಅವರು ನಿರ್ವಹಿಸಿ ಮಾತನಾಡಿ, ಮಳೆಗಾಲದಲ್ಲಿ ಪ್ರತಿಯೊಂದು ವಾರ್ಡುಗಳಲ್ಲಿ ಮನೆ ಮನೆಗೆ ತೆರಳಿ ನಿರುಪಯುಕ್ತ ಪ್ಲಾಸ್ಟಿಕ್‍ಗಳನ್ನು ಸಂಗ್ರಹಿಸುವ ಸಂದರ್ಭದಲ್ಲಿ ರೈನ್ ಕೋಟ್ ಹೆಚ್ಚು ಪ್ರಯೋಜನವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಯನ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಎ.ಸಿ., ಪಂಚಾಯಿತಿ ಸದಸ್ಯರಾದ ಎಸ್.ಮೊಹಮ್ಮದ್ ಕುಂಞÂ, ಬಬಿತಾ ರೇಷ್ಮಾ, ಸೌಭಾಗ್ಯಲಕ್ಷ್ಮೀ, ಮಾಶಿದಾ, ವಿಇಒ ರಮೇಶನ್, ಸಹಾಯಕ ಅಬ್ದುಲ್ಲ, ಕುಟುಂಬಶ್ರೀ ಸಿಡಿಎಸ್ ರಾಗಿಣಿ, ಆರ್‍ಪಿ ಸುಗಂ?, ಎಂಇಸಿ ನಿಶಾ ಮುಂತಾದವರು ಭಾಗವಹಿಸಿದರು.

.jpg)
.jpg)
