HEALTH TIPS

ಮವ್ವಾರಿನಲ್ಲಿ ಹೋಮಿಯೋಪತಿ ವೈದ್ಯಕೀಯ ಶಿಬಿರ

ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿ, ಕುಟುಂಬ ಆರೋಗ್ಯ ಕೇಂದ್ರ,  ಆಯುಷ್ ಪ್ರಾಥಮಿಕ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ಹೋಮಿಯೋಪಥಿ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ, ವೈದ್ಯಕೀಯ ಶಿಬಿರವು ಮವ್ವಾರು ಶ್ರೀ ಷಡಾನನ ಗ್ರಂಥಾಲಯದಲ್ಲಿ ಮಂಗಳವಾರ ನಡೆಯಿತು. 


ಶಿಬಿರವನ್ನು ಉದ್ಘಾಟಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಾ ಮಾತನಾಡಿದರು.  ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ ಅಧ್ಯಕ್ಷತೆ ವಹಿಸಿದರು. ಗ್ರಾಮ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಎ.ಸಿ. ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಶಿಬಿರದಲ್ಲಿ ಮುಳಿಯಾರು ಹೋಮಿಯೋಪಥಿ ವೈದ್ಯಾ?ಕಾರಿ   ಡಾ. ಅಶ್ವಿನಿ ಕೆ.ವಿ ಅವರು ಹೋಮಿಯೋ ಔಷ?ಗಳ ಬಗ್ಗೆ ತಿಳುವಳಿಕೆ ತರಗತಿ ನಡೆಸಿಕೊಟ್ಟರು.  ಕುಂಬ್ಡಾಜೆ ಆಯುಷ್ ಆರೋಗ್ಯ ಕೇಂದ್ರದ ಹೆಲ್ತ್ ಇನ್ಸ್‍ಪೆಕ್ಟರ್ ಸುರೇಶ್ ಕುಮಾರ್ ಅವರು ಸಾಂಕ್ರಾಮಿಕ ರೋಗಗಳ ಬಗ್ಗೆ ತರಗತಿ ನಡೆಸಿಕೊಟ್ಟರು.

ಆರಂಭದಲ್ಲಿ  ಕುಂಬ್ಡಾಜೆ ಹೋಮಿಯೋಪಥಿಕ್ ವೈದ್ಯಾ?ಕಾರಿ ಡಾ. ಐಶ್ವರ್ಯ ಕೆ. ಸ್ವಾಗತಿಸಿ, ಆಶಾ ಕಾರ್ಯಕರ್ತೆ ಸುಲೋಚನಾ ವಂದಿಸಿದರು.

ಶಿಬಿರದಲ್ಲಿ ಸುಮಾರು 60ಕ್ಕಿಂತಲೂ ಅಧಿಕ ಮಂದಿ ಆರೋಗ್ಯ ತಪಾಸಣೆ ಮಾಡಿಕೊಂಡರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries