ಕಾಸರಗೋಡು: ಕೇರಳ ಅನುದಾನಿತ ಶಾಲಾ ನೌಕರರ ಭವಿಷ್ಯ ನಿಧಿಯ ಕಾಸರಗೋಡು ಜಿಲ್ಲೆಯ ನೌಕರರ ಭವಿಷ್ಯ ನಿಧಿ ಕ್ರೆಡಿಟ್ ಕಾರ್ಡ್ ಪ್ರಕಟಣೆಯನ್ನು ಕಾಸರಗೋಡು ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಪಿ.ವಿ. ರಫೀಕ್ ಉದ್ಘಾಟಿಸಿದರು. ಸಹಾಯಕ ಭವಿಷ್ಯ ನಿಧಿ ಅಧಿಕಾರಿ ಇ.ಪಿ. ಉಷಾ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಸಹಾಯಕ ಪ್ರಭಾರಿ ಇ.ಶೈಮಾ, ಸೂಪರಿಂಟೆಂಡೆಂಟ್ ಕೆ.ಟಿ. ಸಂತೋಷ್, ಪಿಎಫ್ ಗೈನ್, ನೋಡಲ್ ಅಧಿಕಾರಿ ಡಿ.ಅರುಣಕುಮಾರಿ, ಸೆಕ್ಷನ್ ಕ್ಲರ್ಕ್ ಎ.ಕೆ. ರಮ್ಯಾ ಮತ್ತಿತರರು ಉಪಸ್ಥಿತರಿದ್ದರು. ಕೆ.ಸತೀಶ ಸ್ವಾಗತಿಸಿದರು ಮತ್ತು ಕೆ.ಪಿ. ರಾಹುಲ್ ವಂದಿಸಿದರು.


