HEALTH TIPS

ಲಾರಿಗಳಿಂದ ಬ್ಯಾಟರಿ ಕಳವು-ಮತ್ತೊಬ್ಬನ ಬಂಧನ

ಕಾಸರಗೋಡು: ಗ್ಯಾರೇಜ್ ಹಾಗೂ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರುಬಂಧಿಸಿದ್ದ ಅಬ್ದುಲ್ ಮಜೀದ್‍ನನ್ನು ಹೆಚ್ಚಿನ ವಿಚಾರಣೆಗಾಗಿ ಕುಂಬಳೆ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 

ಕುಂಬಳೆ ಆಸುಪಾಸು ಲಾರಿಗಳಿಂದ ಬ್ಯಾಟರಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆಲಂಪಾಡಿ ತೈವಳಪ್ಪಿನ ಶಮೀರ್ (50) ಎಂಬಾತನನ್ನು ಕುಂಬಳೆ ಪೆÇಲೀಸರು ಇತ್ತೀಚೆಗೆ ಬಂಧಿಸಿದ್ದು, ಈತ ನೀಡಿದ ಮಾಹಿತಿಯನ್ವಯ ಈತನ ಸಹಚರನಾದ ಅಬ್ದುಲ್ ಮಜೀದ್‍ನನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ.   ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಸೀತಾಂಗೋಳಿ, ನಾಯ್ಕಾಪು, ನಾರಾಯಣಮಂಗಲ, ಭಾಸ್ಕರನಗರ, ಪೆರುವಾಡ್ ಎಂಬೆಡೆಗಳಲ್ಲಿ ನಡೆದ ಬ್ಯಾಟರಿ ಕಳವು ಕುರಿತು ತನಿಖೆ ನಡೆಯುತ್ತಿರುವ ಮಧ್ಯೆ ಈ ಬಂಧನ ನಡೆದಿದೆ. ಪ್ರಕರಣದಲ್ಲಿ ಫವಾಸ್, ಫಾರೂಕ್ ಎಂಬವರೂ ಆರೋಪಿಗಳಾಗಿದ್ದು, ಇವರು ತಲೆಮರೆಸಿಕೊಂಡಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. 




 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries