HEALTH TIPS

ಅಮೆರಿಕದ ಸೆನೆಟರ್ ಮತ್ತು ಟ್ರಂಪ್ ಆಪ್ತ ಲಿಂಡ್ಸೆ ಗ್ರಹಾಂ ನಿಧನ

 ವಾಶಿಂಗ್ಟನ್ : ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮುಖ ಮಿತ್ರರಾಗಿದ್ದ ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಅವರು `ಅಲ್ಪಕಾಲದ ಮತ್ತು ಹಠಾತ್ ಅನಾರೋಗ್ಯ'ದ ಕಾರಣ ಶನಿವಾರ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ. 


ಸೌತ್ ಕೆರೊಲಿನಾದ ರಿಪಬ್ಲಿಕನ್ ಸೆನೆಟರ್ ಗ್ರಹಾಂ ಅವರು ಮೊದಲು 1994 ರಲ್ಲಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‍ಗೆ ಆಯ್ಕೆಯಾಗಿದ್ದರು, ನಂತರ 2002, 2008, 2014 ಮತ್ತು 2020 ರಲ್ಲಿ ಸೆನೆಟ್‍ಗೆ ಆಯ್ಕೆಯಾಗಿದ್ದರು ಮತ್ತು ಇತ್ತೀಚೆಗೆ ಸೆನೆಟ್ ಬಜೆಟ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಗ್ರಹಾಂ ಅವರು ಇಸ್ರೇಲ್‍ನ ಪ್ರಬಲ ಬೆಂಬಲಿಗರಾಗಿದ್ದರು ಮತ್ತು ಇರಾನ್ ಯುದ್ಧದ ಸಮರ್ಥಕರಾಗಿದ್ದರು. ತಮ್ಮ ರಾಜಕೀಯ ಜೀವನದುದ್ದಕ್ಕೂ, ಗ್ರಹಾಂ ಅವರು ವಿದೇಶಾಂಗ ನೀತಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳ ಕುರಿತು ನೀಡಿದ ಹೇಳಿಕೆಗಳಿಂದಾಗಿ ಆಗಾಗ್ಗೆ ವಿವಾದಗಳ ಕೇಂದ್ರಬಿಂದುವಾಗಿದ್ದರು.

ಈ ವರ್ಷದ ಜನವರಿಯಲ್ಲಿ ಗ್ರಹಾಂ ಅವರು, ತಾವು ಸಿದ್ಧಪಡಿಸಿದ `ಗ್ರಹಾಂ-ಬ್ಲೂಮೆಂಥಾಲ್ ನಿರ್ಬಂಧಗಳ ಮಸೂದೆ'ಗೆ ಟ್ರಂಪ್ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ತಿಳಿಸಿದ್ದರು. ರಶ್ಯದಿಂದ ತೈಲವನ್ನು ಖರೀದಿಸುವ ಭಾರತ ಸೇರಿದಂತೆ ಇತರ ದೇಶಗಳ ಮೇಲೆ ಶೇಕಡಾ 500 ರಷ್ಟು ಭಾರಿ ಸುಂಕವನ್ನು ವಿಧಿಸಲು ಈ ಮಸೂದೆಯು ಅಮೆರಿಕದ ಅಧ್ಯಕ್ಷರಿಗೆ ಅಧಿಕಾರ ನೀಡುತ್ತದೆ.

`ಫಾಕ್ಸ್ ನ್ಯೂಸ್'ನ ಸಂದರ್ಶನದ ವೇಳೆ, ಇರಾನ್ ವಿರುದ್ಧ ಟ್ರಂಪ್ ಹೊಂದಿರುವ ಧೋರಣೆಯನ್ನು ಬೆಂಬಲಿಸಿದ ಗ್ರಹಾಂ, ಇರಾನ್‍ನ ಆಗಿನ ಸರ್ವೋಚ್ಚ ನಾಯಕ ಆಯತೊಲ್ಲಾ ಆಲಿ ಖಾಮಿನೈ ಅವರನ್ನು `ಆಧುನಿಕ ಕಾಲದ ಹಿಟ್ಲರ್' ಎಂದು ಬಣ್ಣಿಸಿದ್ದರು. `ಅಧ್ಯಕ್ಷರೇ, ನಾನು ನಿಮ್ಮ ಸ್ಥಾನದಲ್ಲಿದ್ದರೆ, ಜನರನ್ನು ಕೊಲ್ಲುತ್ತಿರುವ ಅಲ್ಲಿನ ನಾಯಕತ್ವವನ್ನೇ ಕೊಂದು ಮುಗಿಸುತ್ತಿದ್ದೆ. ನೀವು ಇದಕ್ಕೆ ಅಂತ್ಯ ಹಾಡಬೇಕು" ಎಂದು ಪ್ರತಿಪಾದಿಸಿದ್ದ ಗ್ರಹಾಂ , ಇರಾನ್‍ನ ಸರ್ವೋಚ್ಚ ನಾಯಕರನ್ನು ಅಧಿಕಾರದಿಂದ ಮುಕ್ತಗೊಳಿಸುವುದರಿಂದ ಆ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ಸಹಾಯವಾಗುತ್ತದೆ ಎಂದು ವಾದಿಸಿದ್ದರು.

ಇರಾನ್ ಅಥವಾ ರಶ್ಯದಿಂದ ಗ್ರಹಾಂಗೆ ವಿಷಪ್ರಾಶನ ?

ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ನಿಧನದ ವರದಿಯನ್ನು ಇರಾನ್ ಸ್ವಾಗತಿಸಿದ ಬೆನ್ನಲ್ಲೇ ಗ್ರಹಾಂ ಅವರ ಹಠಾತ್ ನಿಧನದ ಸಂದರ್ಭಗಳ ಕುರಿತು ಅಂತರ್ಜಾಲದಲ್ಲಿ ಪಿತೂರಿ ಸಿದ್ಧಾಂತಗಳು ಮುನ್ನೆಲೆಗೆ ಬಂದಿವೆ.

ಇರಾನ್ ಮಾಧ್ಯಮಗಳು ಹೊರಡಿಸಿದ ಹೇಳಿಕೆಯಲ್ಲಿ `ಯುದ್ಧಕೋರ ಮತ್ತು ಇರಾನ್ ವಿರೋಧಿ ಅಮೆರಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ನರಕಕ್ಕೆ ಸೇರಿರುವುದಕ್ಕೆ ನಾವು ಇರಾನ್ ರಾಷ್ಟ್ರವನ್ನು ಅಭಿನಂದಿಸುತ್ತೇವೆ' ಎಂದು ತಿಳಿಸಲಾಗಿದೆ. ಅಲ್ಲದೆ, ಅವರ ನಿಧನಕ್ಕೆ ಕೆಲವೇ ದಿನಗಳ ಮೊದಲು, ಗ್ರಹಾಂ ತಮ್ಮ ಪ್ರಮುಖ ಗುರಿಯಾಗಿದ್ದಾರೆ ಎಂದು ಇರಾನ್ ಬಹಿರಂಗವಾಗಿ ಘೋಷಿಸಿತ್ತು. ಅವರ ಸಾವಿಗೆ ಐದು ದಿನಗಳ ಮೊದಲು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ್ (ಐಆರ್‍ಜಿಸಿ) ಅವರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿತ್ತು ಎಂದು ವರದಿಯಾಗಿದೆ.

ವಿದೇಶ ಪ್ರವಾಸದಲ್ಲಿದ್ದಾಗ ಅಥವಾ ಅಮೆರಿಕಕ್ಕೆ ಮರಳಿದ ನಂತರ ಯಾವುದೇ ವಿದೇಶಿ ಶತ್ರುಗಳು ಅವರಿಗೆ ವಿಷ ಉಣಿಸಿರಬಹುದೇ ಎಂದು ಅಮೆರಿಕದ ಬಲಪಂಥೀಯ ರಾಜಕೀಯ ಕಾರ್ಯಕರ್ತೆ ಲಾರಾ ಲೂಮರ್ ಪ್ರಶ್ನಿಸಿದ್ದು ಅವರ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಲೂಮರ್ ಅವರು ರಶ್ಯದ ಪಾತ್ರದ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದ್ದಾರೆ. ಆಯತೊಲ್ಲಾ ಅಲಿ ಖಾಮಿನೈ ಅವರ ಅಂತ್ಯಕ್ರಿಯೆಗೆ ರಶ್ಯ ನಿಯೋಗವನ್ನು ಕಳುಹಿಸಿತ್ತು. ಅದೇ ಸಮಯದಲ್ಲಿ ಗ್ರಹಾಂ ಮಾಸ್ಕೋ ವಿರುದ್ಧದ ನಿರ್ಬಂಧಗಳನ್ನು ಬೆಂಬಲಿಸಲು ಉಕ್ರೇನ್‍ಗೆ ಭೇಟಿ ನೀಡಿದ್ದರು ಎಂಬ ಬಗ್ಗೆ ಅವರು ಗಮನ ಸೆಳೆದಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries