HEALTH TIPS

ಇರಾನ್ ಮೇಲೆ ಅಮೆರಿಕಾದಿಂದ ಬೃಹತ್ ವೈಮಾನಿಕ ದಾಳಿ : ಕ್ಷಿಪಣಿ, ಡ್ರೋನ್ ನೆಲೆಗಳು ಸೇರಿದಂತೆ 140 ಗುರಿಗಳ ಮೇಲೆ ಪ್ರಹಾರ

 ವಾಶಿಂಗ್ಟನ್: ವಾಣಿಜ್ಯ ಹಡಗಿಗೆ ಸಂಬಂಧಿಸಿದ ಘಟನೆಯ ನಂತರ ಹಾರ್ಮುಝ್ ಜಲಸಂಧಿಯನ್ನು ಮತ್ತೊಮ್ಮೆ ಮುಚ್ಚಿರುವುದಾಗಿ ಇರಾನ್ ಘೋಷಿಸಿದ ಕೆಲವೇ ಗಂಟೆಗಳಲ್ಲಿ, ಅಮೆರಿಕವು ರವಿವಾರ ಇರಾನ್ ಮೇಲೆ ಮೂರನೇ ಹಂತದ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದೆ. 


ಈ ದಾಳಿಗಳು ಉಭಯ ದೇಶಗಳ ನಡುವಿನ ಸಂಘರ್ಷದಲ್ಲಿ ಮತ್ತೊಂದು ತೀವ್ರ ಏರಿಕೆಯನ್ನು ಸೂಚಿಸಿದ್ದು ಕದನ ವಿರಾಮ ಒಪ್ಪಂದವನ್ನು ಮತ್ತಷ್ಟು ದುರ್ಬಲಗೊಳಿಸಿವೆ.

ಇತ್ತೀಚಿನ ದಾಳಿಗಳು ಇರಾನ್‍ನ ಹಡಗು-ವಿರೋಧಿ ಮಿಲಿಟರಿ ಜಾಲದ ವಿವಿಧ ಭಾಗಗಳನ್ನು ಗುರಿಯಾಗಿಸಿಕೊಂಡಿದ್ದವು. ವರದಿಯಾದ ಗುರಿಗಳಲ್ಲಿ ವಾಯು ಕಣ್ಗಾವಲು ರೇಡಾರ್‌ಗಳ, ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹಣಾ ಸೌಲಭ್ಯಗಳು, ಕ್ಷಿಪಣಿ ಮತ್ತು ಡ್ರೋನ್ ಉಡಾವಣಾ ನೆಲೆಗಳು, ಮೇಲ್ಮೈ ಕಣ್ಗಾವಲು ರೇಡಾರ್‌ಗಳು ಮತ್ತು ಕ್ಷಿಪಣಿ ಲಾಂಚರ್‌ಗಳು ಸೇರಿವೆ ಎಂದು ಮೂಲಗಳನ್ನು ಉಲ್ಲೇಖಿಸಿ `ಆಕ್ಸಿಯೋಸ್' ವರದಿ ಮಾಡಿದೆ.

ಅಮೆರಿಕದ ಪಡೆಗಳು ಇರಾನ್‍ನ ಸುಮಾರು 140 ಮಿಲಿಟರಿ ಗುರಿಗಳ ಮೇಲೆ ದಾಳಿ ನಡೆಸಿವೆ. ಇರಾನ್‍ನ ಕ್ಷಿಪಣಿ ಮತ್ತು ಡ್ರೋನ್ ನೆಲೆಗಳು, ನೌಕಾ ಸಾಮರ್ಥ್ಯಗಳು, ಮದ್ದುಗುಂಡು ಸಂಗ್ರಹಣಾ ಸೌಲಭ್ಯಗಳು, ಸಂವಹನ ಜಾಲಗಳು ಮತ್ತು ಕರಾವಳಿ ಕಣ್ಗಾವಲು ಸ್ಥಳಗಳು ಈ ಗುರಿಗಳಲ್ಲಿ ಸೇರಿವೆ. ಜಲಸಂಧಿಯ ಮೂಲಕ ಮುಕ್ತವಾಗಿ ಸಂಚರಿಸುವ ವಾಣಿಜ್ಯ ಹಡಗುಗಳು ಮತ್ತು ನಾಗರಿಕ ನಾವಿಕರ ಮೇಲೆ ದಾಳಿ ಮಾಡುವ ಇರಾನ್‍ನ ಸಾಮರ್ಥ್ಯವನ್ನು ಕುಗ್ಗಿಸುವುದು ಇದರ ಉದ್ದೇಶವಾಗಿದೆ. ಪ್ರಮುಖ ಅಂತರರಾಷ್ಟ್ರೀಯ ಕಡಲ ಕಾರಿಡಾರ್ ಮೂಲಕ ವಾಣಿಜ್ಯ ಹಡಗುಗಳ ಸಂಚಾರ ಮುಂದುವರಿದಿದೆ' ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.

ದಾಳಿಯ ಪ್ರಭಾವದ ವಲಯಗಳು ಅಸಲುಯೆಹ್‍ನಿಂದ ಬುಶೆಹ್ರ್‍ವರೆಗೆ ಹರಡಿಕೊಂಡಿವೆ ಎಂದು ವರದಿಗಳು ತಿಳಿಸಿವೆ, ಆದರೆ ದೃಢೀಕರಿಸದ ವರದಿಗಳು ಟೆಹರಾನ್‍ನ ಮೇಲೆಯೂ ದಾಳಿ ನಡೆದಿರುವುದನ್ನು ಸೂಚಿಸಿವೆ. ಬಂದರ್-ಎ-ಜಾಸ್ಕ್‍ನಲ್ಲಿ ಕನಿಷ್ಠ 10 ದೊಡ್ಡ ಸ್ಫೋಟಗಳು ಸಂಭವಿಸಿವೆ . ದಕ್ಷಿಣ ಇರಾನ್‍ನ ಅಸಲುಯೆಹ್ ವಿರುದ್ಧವೂ ವೈಮಾನಿಕ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

ಇರಾನ್ ನೌಕಾಪಡೆಯ ಅಧಿಕಾರಿ ಮೃತ್ಯು

ಹಾರ್ಮುಝ್ ಜಲಸಂಧಿಯ ಸಮೀಪ ಶನಿವಾರ ತಡರಾತ್ರಿ ನಡೆದ ಅಮೆರಿಕದ ದಾಳಿಯಲ್ಲಿ ನೌಕಾಪಡೆಯ ವಾಯು ರಕ್ಷಣಾ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಇರಾನ್ ರವಿವಾರ ಖಚಿತಪಡಿಸಿದೆ.

ಹಾರ್ಮುಝ್ ಜಲಮಾರ್ಗದ ಸಮೀಪವಿರುವ ದಕ್ಷಿಣದ ಜಾಸ್ಕ್ ಕೌಂಟಿಯ ಮೇಲಿನ ದಾಳಿಯ ಸಂದರ್ಭದಲ್ಲಿ, ರಕ್ಷಣಾತ್ಮಕ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದ್ದ ಇರಾನ್ ನೌಕಾಪಡೆಯ ವಾಯು ರಕ್ಷಣಾ ಅಧಿಕಾರಿ ಹಮೀದ್ರೆಜಾ ದೆಹಘನ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries