HEALTH TIPS

35 ವರ್ಷಗಳ ಹಿಂದಿನ 1,000 ರೂ.ಸಾಲಕ್ಕೆ ಬಡ್ಡಿ ಸಹಿತ 25,000 ರೂ.ಮರಳಿಸಿದ ಕೇರಳದ ವ್ಯಕ್ತಿ

 ತಿರುವನಂತಪುರ:  ಸೌದಿ ಅರೇಬಿಯಾದಲ್ಲಿ ಗೆಳೆಯನಿಂದ 1,000 ರೂ.ಸಾಲವನ್ನು ಪಡೆದಿದ್ದ ಕೇರಳದ ವ್ಯಕ್ತಿಯೊಬ್ಬರು 35 ವರ್ಷಗಳ ಬಳಿಕ ಕೊನೆಗೂ ಆತನನ್ನು ಪತ್ತೆ ಹಚ್ಚಿ ಬಡ್ಡಿಸಹಿತ 25,000 ರೂ.ಗಳನ್ನು ಮರಳಿಸಿ ಋಣಮುಕ್ತರಾಗಿದ್ದಾರೆ. 


ಯಾವುದೇ ಫೋನ್ ನಂಬರ್,ವಿಳಾಸ ಅಥವಾ ಸಂಪರ್ಕ ವಿವರಗಳಿಲ್ಲದಿದ್ದರೂ ಇಸ್ಮಾಯಿಲ್ ವರ್ಷಗಳಿಂದ ಕಾಣದ ತನ್ನ ಮಾಜಿ ಸಹೋದ್ಯೋಗಿ ಎಡ್ಲ ಲಚನ್ನಾ ಅವರಿಗಾಗಿ ನಡೆಸಿದ ಹುಡುಕಾಟವು ಜುಲೈ 9 ರಂದು ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಧರ್ಮಪುರಿಯಲ್ಲಿ ಕೊನೆಗೊಂಡಿದೆ.

ಅಲ್ಲಿ ತನ್ನ ಸ್ನೇಹಿತನನ್ನು ಪತ್ತೆ ಹಚ್ಚಿದ ಅವರು ದಶಕಗಳಿಂದಲೂ ಹೊತ್ತುಕೊಂಡಿದ್ದ ಋಣಭಾರದಿಂದ ಮುಕ್ತರಾಗಿದ್ದಾರೆ.

ಇಸ್ಮಾಯಿಲ್ ಮತ್ತು ಲಚನ್ನಾ 1991 ರಲ್ಲಿ ಸೌದಿ ಅರೇಬಿಯಾದ ಅಬ್‌ಕೈಕ್‌ನಲ್ಲಿ ಕೆಲಸ ಮಾಡುವಾಗ ಸ್ನೇಹಿತರಾಗಿದ್ದರು. ಅವರು ಇತರ ಮೂವರು ವಲಸೆ ಕಾರ್ಮಿಕರೊಂದಿಗೆ ಒಂದೇ ಕೋಣೆಯಲ್ಲಿದ್ದರು ಮತ್ತು ಸುಮಾರು ಐದು ವರ್ಷಗಳ ಕಾಲ ಒಟ್ಟಿಗೆ ವಾಸವಾಗಿದ್ದರು.

ಆ ಸಮಯದಲ್ಲಿ ಇಸ್ಮಾಯಿಲ್ ಲಚನ್ನಾರಿಂದ 120 ಸೌದಿ ರಿಯಾಲ್ ಸಾಲ ಪಡೆದಿದ್ದರು. ಆಗ ಅದರ ಮೌಲ್ಯ ಸುಮಾರು 1,000 ರೂಪಾಯಿ ಆಗಿತ್ತು. ತನಗೆ ಸಾಧ್ಯವಾದಾಗ ಹಣವನ್ನು ಮರಳಿ ನೀಡುವುದಾಗಿ ಇಸ್ಮಾಯಿಲ್ ಭರವಸೆ ನೀಡಿದ್ದರು.

ಸ್ವಲ್ಪ ಸಮಯದ ನಂತರ ಲಚನ್ನಾ ಭಾರತಕ್ಕೆ ಮರಳಿದ್ದರು. ಆ ಸಮಯದಲ್ಲಿ ಮೊಬೈಲ್ ಫೋನ್‌ಗಳಾಗಲಿ ಅಥವಾ ಸಾಮಾಜಿಕ ಜಾಲತಾಣಗಳಾಗಲಿ ಇಲ್ಲದ ಕಾರಣ ಅವರಿಬ್ಬರ ನಡುವಿನ ಸಂಪರ್ಕ ಕಡಿತಗೊಂಡಿತ್ತು.

ಹಣದ ಮೊತ್ತ ಬಹಳ ದೊಡ್ಡದೇನಲ್ಲದಿದ್ದರೂ ಇಸ್ಮಾಯಿಲ್ ಅದನ್ನು ಎಂದಿಗೂ ಮರೆತಿರಲಿಲ್ಲ. ಹಳೆಯ ಸ್ನೇಹಿತನನ್ನು ಹುಡುಕುವ ಕೆಲಸ ಸುಲಭವಾಗಿರಲಿಲ್ಲ. ಅವರ ಬಳಿ ಲಚನ್ನಾ ಅವರ ಫೋನ್ ನಂಬರ್,ವಿಳಾಸ ಅಥವಾ ಯಾವುದೇ ಸಂಪರ್ಕ ವಿವರಗಳು ಇರಲಿಲ್ಲ. ಅವರಿಗೆ ನೆನಪಿದ್ದ ಒಂದೇ ಒಂದು ವಿಷಯವೆಂದರೆ ಲಚನ್ನಾ ಧರ್ಮಪುರಿಗೆ ಸೇರಿದವರು ಎನ್ನುವುದು.

ಅಂತರ್ಜಾಲದಲ್ಲಿ ಹುಡುಕಾಟಗಳು ಮತ್ತು ಆ ಒಂದು ಮಾಹಿತಿಯ ಸಹಾಯದಿಂದ ಧರ್ಮಪುರಿಗೆ ತೆರಳಿದ ಅವರು ಸ್ಥಳೀಯರ ನೆರವಿನಿಂದ ತನ್ನ ಮಾಜಿ ಸಹೋದ್ಯೋಗಿಯ ಕುಟುಂಬವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಲಚನ್ನಾ ಪ್ರಸ್ತುತ ಗಲ್ಫ್‌ನಲ್ಲಿ ಕೆಲಸ ಮಾಡುತ್ತಿದ್ದು,ಅವರೊಂದಿಗೆ ವಾಟ್ಸ್‌ಆಯಪ್ ವಿಡಿಯೋ ಕಾಲ್ ಮೂಲಕ ಮಾತನಾಡಿದ ಇಸ್ಮಾಯಿಲ್ ಅವರ ಕುಟುಂಬಕ್ಕೆ 25,000 ರೂ.ಗಳನ್ನು ಹಸ್ತಾಂತರಿಸಿದರು.

'ನಾನು ನೀಡಿದ್ದ 120 ರಿಯಾಲ್‌ಗೆ ಅವರು 25,000 ರೂ.ಗಳನ್ನು ಹೇಗೆ ಲೆಕ್ಕ ಹಾಕಿದರು ಎನ್ನುವುದು ನನಗೆ ತಿಳಿದಿಲ್ಲ. ಅವರು ಅತ್ಯಂತ ಪ್ರಾಮಾಣಿಕ ಮತ್ತು ಒಳ್ಳೆಯ ಮನುಷ್ಯ. ಅದಕ್ಕಾಗಿಯೇ ಅವರು ನನಗೆ ಹೆಚ್ಚು ಹಣವನ್ನು ನೀಡಿದ್ದಾರೆ. ಇದು ಕೇವಲ ನಮ್ಮ ಸ್ನೇಹದ ಪ್ರತಿಬಿಂಬವಾಗಿದೆ' ಎಂದು ಲಚನ್ನಾ ಹೇಳಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries