HEALTH TIPS

ಅಮೆರಿಕ ವಿರುದ್ಧ ಪ್ರತೀಕಾರದ ದಾಳಿ ನಿಲ್ಲಿಸಲಾಗಿದೆ: ಇರಾನ್‌

ಟೆಹರಾನ್‌: ಕಳೆದ ಎರಡು ದಿನಗಳಿಂದ ಇರಾನ್‌ ಮೇಲಿನ ಮೇಲಿನ ದಾಳಿಯನ್ನು ಅಮೆರಿಕ ನಿಲ್ಲಿಸಿದೆ. ಹೀಗಾಗಿ, ಪಶ್ಚಿಮ ಏಷ್ಯಾದಲ್ಲಿರುವ ಅದರ ಮಿತ್ರರಾಷ್ಟ್ರಗಳ ವಿರುದ್ಧ ಪ್ರತೀಕಾರದ ದಾಳಿಯನ್ನು ನಿಲ್ಲಿಸಿರುವುದಾಗಿ ಇರಾನ್‌ ಭಾನುವಾರ ತಿಳಿಸಿದೆ.‌

'ನಮ್ಮ ಕಾರ್ಯತಂತ್ರವು ಮೂಲಭೂತವಾಗಿ ಪ್ರತೀಕಾರದ್ದಾಗಿತ್ತು. 

ಹೀಗಾಗಿ, ಪ್ರತೀಕಾರದ ಕಾರ್ಯಾಚರಣೆಗಳನ್ನು ನಿಲ್ಲಿಸಿದ್ದೇವೆ' ಎಂದು ಸೇನಾ ವಕ್ತಾರ ಮೊಹಮ್ಮದ್‌ ಅಕ್ರಮಿನಿಯಾ ಹೇಳಿದ್ದಾರೆ.‌

ಅಮೆರಿಕ ಸತತವಾಗಿ ನಡೆಸುತ್ತಿದ್ದ ಬಾಂಬ್‌ ದಾಳಿಗಳು ಈಗ ಸ್ವಲ್ಪ ನಿಂತಿವೆ. ಇದರಿಂದ, ಮತ್ತೆ ಶಾಂತಿ ಮಾತುಕತೆಗಳು ಆರಂಭವಾಗಬಹುದು ಎಂಬ ಭರವಸೆ ಮೂಡಿಸಿದೆ. ಆದರೆ, 'ಈ ದಾಳಿ ನಿಲ್ಲಲು ಮಾತುಕತೆಯಲ್ಲ; ಬದಲಿಗೆ ಅಮೆರಿಕದ ಬಳಿ ಇರುವ ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರಗಳ ದಾಸ್ತಾನು ಮುಗಿಯುತ್ತಾ ಬಂದಿರುವುದೇ ಇದಕ್ಕೆ ಕಾರಣ ಇರಬಹುದು' ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

'ಇರಾನ್‌ ವಿರುದ್ಧದ ಅಮೆರಿಕದ ಕಾರ್ಯಾಚರಣೆಗಳು ಸ್ಥಗಿತಗೊಂಡಿವೆ' ಎಂದು ರಕ್ಷಣಾ ಇಲಾಖೆಯ ಮೂಲವನ್ನು ಉಲ್ಲೇಖಿಸಿ ಸಿಎನ್‌ಎನ್‌ ವರದಿ ಮಾಡಿದೆ.

ಇರಾನ್‌ ಮೇಲೆ ಹೆಚ್ಚಿನ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಬೆದರಿಕೆ ಹಾಕಿದ್ದರು.

'ಶಸ್ತ್ರಾಸ್ತ್ರಗಳ ಪೂರೈಕೆ ಕುಸಿಯುತ್ತಿರುವುದರಿಂದ ಸೇನಾ ಕಾರ್ಯಾಚರಣೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ' ಎಂದು 'ದಿ ನ್ಯೂಯಾರ್ಕ್‌ ಟೈಮ್ಸ್‌' ವರದಿ ಮಾಡಿದೆ.

'ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ವಾಷಿಂಗ್ಟನ್‌ಗೆ ಮಂಗಳವಾರ ಭೇಟಿ ನೀಡಲಿದ್ದು, ಅಮೆರಿಕ ತನ್ನ ದಾಳಿಯನ್ನು ಪುನರಾರಂಭಿಸಿದರೆ ಯುದ್ಧ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ' ಎಂದು ಇರಾನ್‌ ಸೇನೆ ಭಾನುವಾರ ಎಚ್ಚರಿಸಿದೆ.

'ಯೆಮೆನ್‌ನ ವಾಯವ್ಯ ಪ್ರದೇಶದಲ್ಲಿ ಸೌದಿ ಅರೇಬಿಯಾದ ಡ್ರೋನ್‌ ಅನ್ನು ಹೊಡೆದುರುಳಿಸಲಾಗಿದೆ' ಎಂದು ಇರಾನ್‌ ಬೆಂಬಲಿತ ಹೂಥಿ ಬಂಡುಕೋರರು ಭಾನುವಾರ ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಹೊರ್ಮುಜ್‌ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಆರು ಹಡಗುಗಳನ್ನು ಇರಾನ್‌ನ ಸಶಸ್ತ್ರ ಪಡೆಗಳು ಭಾನುವಾರ ತಡೆದಿವೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries