ಕಾಸರಗೋಡು: ದೆಹಲಿಯಿಂದ ಕಡಿಮೆ ಬೆಲೆಗೆ ಇನ್ನೋವಾ ಕಾರುಗಳನ್ನು ಖರೀದಿಸಿ ನೀಡುವುದಾಗಿ ತಿಳಿಸಿ ಹಣ ಪಡೆದು ವಂಚಿಸಿದ ಯುವಕನನ್ನು ಗುರುವಾಯೂರು ಠಾಣೆ ಪೆÇಲೀಸರು ಕಾಸರಗೋಡಿನಿಂದ ಬಂಧಿಸಿದ್ದಾರೆ.
ಕಾಸರಗೋಡು ಪಳಳಿಕೆರೆ ನಿವಾಸಿ ಮುಹಮ್ಮದ್ ತನ್ವೀರ್ (32)ಬಂಧಿತ. ಗುರುವಾಯೂರು ಠಾಣೆ ಎಸ್‍ಎಚ್‍ಓ ವಿಜಿನ್ ಕೆ. ವೇಣುಗೋಪಾಲ್ ಅವರ ನೇತೃತ್ವದಲ್ಲಿರುವ ಪೆÇಲೀಸರ ತಂಡ ಬಂಧಿಸಿದೆ. ತಾಮರಯೂರ್ ನಿವಾಸಿ ಫೆಲಿಕ್ಸ್ ಆಂಟನಿ ನೀಡಿದ ದೂರಿನನ್ವಯ ಪೆÇಲೀಸರು ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. 2024ರಲ್ಲಿ ಪ್ರಕರಣಕ್ಕೆ ನಡೆದಿದ್ದು, ಕಡಿಮೆ ಬೆಲೆಗೆ 3 ಇನ್ನೋವಾ ಕಾರುಗಳನ್ನು ಖರೀದಿಸಿ ನೀಡುವುದಾಗಿ ತಿಳಿಸಿ ತನ್ನ ಕೈಯಿಂದ ತನ್ವೀರ್ 22 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಾನೆ. ಆದರೆ ಮೂರು ಕಾರುಗಳ ಬದಲಾಗಿ ಒಂದು ಕಾರು ಮಾತ್ರ ನೀಡಿದ್ದು, ನಂತರ ಮಹಮ್ಮದ್ ತನ್ವೀರ್‍ನನ್ನು ಫೆÇೀನ್‍ನಲ್ಲಿ ಸಂಪರ್ಕಿಸಲು ಮುಂದಾದರೂ ಸಾದ್ಯವಾಗಿಲ್ಲ ಎಂದು ಫೆಲಿಕ್ಸ್ ಆಂಟನಿ ನೀಡಿದ ದೂನಲ್ಲಿ ತಿಳಿಸಿದ್ದಾರೆ.

