ಕಾಸರಗೋಡು: ಚೆರುವತ್ತೂರು-ಚೀಮೇನಿ ರಸ್ತೆಯ ಕೊತ್ತಂಗರ ಎಂಬಲ್ಲಿ ಮನೆ ನಿರ್ಮಾಣ ಕಾಮಗಾರಿ ಮಧ್ಯೆ ಭಾರೀ ಭೂಕುಸಿತ ಉಂಟಾಗಿದ್ದು, ಮಣ್ಣಿನಡಿ ಸಿಲುಕಿದ್ದ ಮೂರು ಮಂದಿಯನ್ನು ಸಾಹಸಕರ ರೀತಿಯಲ್ಲಿ ರಕ್ಷಿಸಲಾಗಿದೆ. ಮನೆಯೊಂದರ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸ್ಥಳದ ಬಳಿ ಮಂಗಳವಾರ ಕಾರ್ಮಿಕರು ಕೆಲಸ ನಡೆಸುತ್ತಿರುವ ಮಧ್ಯೆ ಮನೆಸನಿಹದ ತಡೆಗೋಡೆ ಏಕಾಏಕಿ ಕುಸಿದು ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದರು.
ತಕ್ಷಣ ಸ್ಥಳೀಯರು ನೀಡಿದ ಮಾಹಿತಿಯನ್ವಯ ಆಗಮಿಸಿದ ಅಗ್ನಿಶಾಮಕದಳ ಹಾಗೂ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ, ಮೂರೂ ಮಂದಿಯನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳು ಚೇತರಿಸುತ್ತಿದ್ದಾರೆ.

