ಕಾಸರಗೋಡು: ಜಿಲ್ಲೆಯ ಮೂರು ಮಂದಿ ಡಿವೈಎಸ್‍ಪಿಗಳನ್ನು ವರ್ಗಾವಣೆ ಮಾಡಲಾಗಿದೆ. ಜಿಲ್ಲಾ ಸ್ಪೆಷಲ್ ಬ್ರಾಂಚ್ ಡಿವೈಎಸ್‍ಪಿ ನೀಲೇಶ್ವರ ನಿವಾಸಿ ಎಂ. ಸುನಿಲ್ ಕುಮಾರ್ ಅವರನ್ನು ಕಾಸರಗೋಡು ಸ್ಟೇಟ್ ಸ್ಪೆಷಲ್ ಬ್ರಾಂಚ್ ಡಿವೈಎಸ್‍ಪಿಯಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಇವರನ್ನು ಪಾಲಕ್ಕಾಡಿಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದ್ದು, ವರ್ಗಾವಣೆ ಆದೇಶ ಬದಲಾಯಿಸಲಾಗಿದೆ.
ಬೇಕಲ ಡಿವೈಎಸ್‍ಪಿಯಾಗಿ ಈ ಹಿಂದೆ ವಿ.ಕೆ. ವಿಶ್ವಂಭರನ್ ಅವರನ್ನು ನೇಮಕ ಮಾಡಲಾಗಿದ್ದು, ನಂತರ ಈ ನೇಮಕಾತಿ ಬದಲಾಯಿಸಿ, ಕಾಸರಗೋಡು ವಿಜಿಲನ್ಸ್ ಅಂಡ್ ಆಂಟಿ ಕರಪ್ಷನ್ ಬ್ಯೂರೋಗೆ ವರ್ಗಾಯಿಸಲಾಗಿದೆ. ಕೆ. ವಿನೋದ್‍ನ್ನು ಬೇಕಲದ ನೂತನ ಡಿವೈಎಸ್‍ಪಿಯಾಗಲಿದ್ದಾರೆ. ಕಾರಡ್ಕ ನಿವಾಸಿ ವಿನೋದ್ ಅವರು ಪ್ರಸಕ್ತ ತಾಮರಶ್ಶೇರಿ ಡಿವೈಎಸ್‍ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಎಸ್‍ಎಸ್‍ಬಿ ಡಿವೈಎಸ್‍ಪಿಯಾಗಿ ನೇಮಕಗೊಂಡಿದ್ದ ಟಿ. ಉತ್ತಮ್‍ದಾಸ್ ಅವರ ಈ ನೇಮಕಾತಿ ಬದಲಾಯಿಸಿ ಎಸ್‍ಎಂಎಸ್ ಡಿವೈಎಸ್‍ಪಿಯಾಗಿ ನೇಮಕಗೊಳಿಸಲಾಗಿದೆ. ಡಿವೈಎಸ್‍ಪಿಗಳ ವರ್ಗಾವಣೆ ಬೆನ್ನಲ್ಲೇ ಇನ್ಸ್‍ಪೆಕ್ಟರ್‍ಗಳ ವರ್ಗಾವಣಾ ಪಟ್ಟಿಯ ತಯಾರಿಯೂ ನಡೆಯುತ್ತಿದೆ.



