HEALTH TIPS

Experientia-ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ತರಬೇತಿ ಕಾರ್ಯಕ್ರಮ

ಕಾಸರಗೋಡು: ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 'ಇ. ಶ್ರೀಧರನ್ ಸೆಂಟರ್ ಫಾರ್ ಲೈಫ್ ಸ್ಕಿಲ್ಸ್ ಎಜುಕೇಶನ್'ನ ಆಶ್ರಯದಲ್ಲಿ 'ಎಕ್ಸ್‍ಪೀರಿಯೆಂಟಿಯಾ' (Experientia) ಎಂಬ ಮೂರು ದಿನಗಳ ತರಬೇತಿ ಕಾರ್ಯಕ್ರಮ ಜರುಗಿತು.  


ಜೀವನ ಕೌಶಲ ಶಿಕ್ಷಣ ವಿಷಯದ ಸ್ನಾತಕೋತ್ತರ ಡಿಪೆÇ್ಲಮಾ ಕಾರ್ಯಕ್ರಮದ ಐದನೇ ತಂಡಕ್ಕಾಗಿ ತರಬೇತಿ ಆಯೋಜಿಸಲಾಗಿತ್ತು.  ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಸಿದ್ದು ಪಿ. ಅಲ್ಗೂರ್ ಸಮಾರಂಭ ಉದ್ಘಾಟಿಸಿದರು. ಪ್ರಭಾರ ಕುಲಸಚಿವ ಪ್ರೊ. ವಿ.ಬಿ. ಸಮೀರ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ನಿರ್ದೇಶಕ ಪ್ರೊ. ಮುಹಮ್ಮದುನ್ನಿ ಇಲಿಯಾಸ್ ಮುಸ್ತಫಾ, ಶಿಕ್ಷಣ ವಿಭಾಗದ ಡೀನ್ ಪ್ರೊ. ವಿ.ಪಿ. ಜೋಶಿತ್ ಮತ್ತು ಡಾ. ಸೀಮಾ ಚಂದ್ರನ್ ಉಪಸ್ಥಿತರಿದ್ದರು.  ಸ್ವಯಂ-ಗುರುತಿಸುವಿಕೆ, ಸಂವಹನ ಕೌಶಲಗಳನ್ನು ಹೆಚ್ಚಿಸುವುದು, ಇತರರೊಂದಿಗೆ ಉತ್ತಮವಾಗಿ ಬೆರೆಯುವುದು, ಮಾನಸಿಕ ಒತ್ತಡವನ್ನು ನಿವಾರಿಸುವುದು ಮತ್ತು ತಂತ್ರಜ್ಞಾನದಲ್ಲಿ ಪ್ರಾವೀಣ್ಯತೆ ಪಡೆಯುವುದು ಮುಂತಾದ ವಿಷಯಗಳ ಕುರಿತು ತಜ್ಞರು ತರಗತಿ ನಡೆಸಿಕೊಟ್ಟರು. 

ಸ್ಥಳೀಯಾಡಳಿತ ಸಂಸ್ಥೆಗಳಿಗೆ ಆಯ್ಕೆಯಾದ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಶಿಕ್ಷಕರು, ವಕೀಲರು, ವೈದ್ಯರು ಮತ್ತು ವಿದ್ಯಾರ್ಥಿಗಳು ಒಳಗೊಂಡಂತೆ ವಿವಿಧ ಕ್ಷೇತ್ರಗಳ ಎಂಬತ್ತು ಮಂದಿ  ತರಬೇತಿಯಲ್ಲಿ ಭಾಗವಹಿಸಿದ್ದರು. ಇದು ಒಂದು ವರ್ಷದ ಡಿಪೆÇ್ಲಮಾ ಕಾರ್ಯಕ್ರಮದನ್ವಯ ನಡೆದ ಮೊದಲ ನೇರ  ತರಬೇತಿ ಕಾರ್ಯಕ್ರಮ ಇದಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries