ಕುಂಬಳೆ: ಅನಂತಪುರದ ವಾಳಯಾರ್ ಸ್ಟೀಲ್ ಕಂಪೆನಿಯ ಕಾರ್ಮಿಕ ಅಸ್ಸಾಂ ಸೋನಿಟ್ಪುರ ಸೋಲಿಬರಿ ನಿವಾಸಿ ಜಾಕೀರ್ ಹುಸೇನ್ (51)ಅವರ ಮೃತದೇಹ ವಾಸಸ್ಥಳದಲ್ಲಿ ಪತ್ತೆಯಾಗಿದ್ದಾರೆ. ಕೆಲಸದ ಮಧ್ಯೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ಇವರು ಬಹಳ ಹೊತ್ತಿನ ವರೆಗೂ ಎದ್ದೇಳದ ಹಿನ್ನೆಲೆಯಲ್ಲಿ ನೋಡಿದಾಗ ಅವರು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಇವರ ಪುತ್ರ ನೀಡಿದ ದೂರಿನನ್ವಯ ಕುಂಬಳೆ ಠಾಣೆ ಪೆÇಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರ ಪುತ್ರ ಶಾಹಿದುಲ್ ಇಸ್ಲಾಂ ಇದೇ ಕಂಪೆನಿಯಲ್ಲಿ ನೌಕರನಾಗಿದ್ದಾನೆ.

