ಮುಳ್ಳೇರಿಯ: ಬೂಟು ಧರಿಸಿ ತರಗತಿಗೆ ತಲುಪಿರುವುದನ್ನು ಪ್ರಶ್ನಿಸಿ ಪ್ಲಸ್‍ವನ್ ವಿದ್ಯಾರ್ಥಿಗಳಿಗೆ ಹಲ್ಲೆಗೈದು ರ್ಯಾಗಿಂಗ್ ನಡೆಸಿರುವ ಬಗ್ಗೆ 13 ಮಂದಿ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಆದೂರು ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜುಲೈ 13ರಂದು ಮಧ್ಯಾಹ್ನ 1 ಗಂಟೆಗೆ ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಘಟನೆ ನಡೆದಿದೆ.
ಪ್ಲಸ್ ವನ್ ಹ್ಯುಮಾನಿಟೀಸ್ ತರಗತಿಯ ಇಬ್ಬರು ವಿದ್ಯಾರ್ಥಿಗಳು ಶೂಸ್ ಧರಿಸಿ ತಲುಪಿರುವುದನ್ನು ಪ್ರಶ್ನಿಸಿ ಪ್ಲಸ್‍ಟು ವಿದ್ಯಾರ್ಥಿಗಳಾದ 13 ಮಂದಿ ತಡೆದು ಹಲ್ಲೆಗೈಯುವ ಮೂಲಕ ರ್ಯಾಗಿಂಗ್ ನಡೆಸಿರುವುದಾಗಿ ಆದೂರು ಠಾಣೆ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.


