ಕುಂಬಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಮಂಜೇಶ್ವರ ತಾಲೂಕು, ಕುಂಬಳೆ ವಲಯದ ಕಂಚಿಕಟ್ಟೆ ಒಕ್ಕೂಟದ 'ವಸುಧಾ' ಸ್ವ-ಸಹಾಯ ಸಂಘದ 5ನೇ ವರ್ಷದ ವಾರ್ಷಿಕೋತ್ಸವ ಜರುಗಿತು.
ಈಸಂದರ್ಭ ಕಳೆದ ಐದು ವರ್ಷಗಳ ಯಶಸ್ವಿ ಪ್ರಯಾಣದಲ್ಲಿ ಯೋಜನೆಯಿಂದ ಸದಸ್ಯರಿಗೆ ದೊರೆತ ವಿವಿಧ ಸೌಲಭ್ಯಗಳು, ಪ್ರಯೋಜನಗಳು ಹಾಗೂ ಅನುದಾನ ಕಾರ್ಯಕ್ರಮಗಳ ಕುರಿತಾದ ಸಮಗ್ರ ಪ್ರಗತಿ ವರದಿಯನ್ನು ಮಂಡಿಸಲಾಯಿತು. ಕುಂಬಳೆ ವಲಯದ ಮೇಲ್ವಿಚಾರಕ ಅಭಿಷೇಕ್ ಡಿ., ಕಂಚಿಕಟ್ಟೆ ಒಕ್ಕೂಟದ ಉಪಾಧ್ಯಕ್ಷೆ ವೀಣಾ, ಸೇವಾಪ್ರತಿನಿಧಿ ಸಂಧ್ಯಾ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದು,
ಈ ಸಂದರ್ಭ ಸಂಘದ ಸದಸ್ಯರು ಹಾಗೂ ಅವರ ಮಕ್ಕಳು ಕವಿತೆ, ಜಾನಪದ ಹಾಡುಗಳು, ಭಕ್ತಿಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು.ಈ ಸಂದರ್ಭ ಎಸ್ಸೆಸೆಲ್ಸಿಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಸಂಘದ ಸದಸ್ಯೆ ಪುಣ್ಯವತಿ ಅವರ ಪುತ್ರಿ ಸಾಹಿತ್ಯ ಅವರನ್ನು ಸನ್ಮಾನಿಸಲಾಯಿತು.


