HEALTH TIPS

ಮುಂಬೈ ಮಳೆಗೆ ಕೊಚ್ಚಿಹೋದ ಹೆದ್ದಾರಿ, ಮುಚ್ಚಿದ ಶಾಲೆ: ನೌಕರರಿಗೆ ಮನೆಯಿಂದಲೇ ಕೆಲಸ

ಮುಂಬೈ: ಭಾನುವಾರ ರಾತ್ರಿಯಿಂದ ಸುರಿಯುತ್ತಿರುವ ಮಹಾಮಳೆಗೆ ಮುಂಬೈ ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಕಡೆ ಮನೆಗಳು ಕುಸಿದಿದ್ದು, ಕೆಲವು ಕಡೆ ರಾಷ್ಟ್ರೀಯ ಹೆದ್ದಾರಿಗಳು ಜಲಾವೃತಗೊಂಡಿವೆ. ರಸ್ತೆಯಲ್ಲಿ ಕಿಲೋ ಮೀಟರ್‌ಗಟ್ಟಲೆ ಸಂಚಾರದಟ್ಟಣೆ ಉಂಟಾಗಿದೆ. 

ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದ್ದು, ಕಳೆದ 24 ಗಂಟೆಯ ಅವಧಿಯಲ್ಲಿ ಸುಮಾರು 300 ಮಿ.ಮೀ ಮಳೆಯಾಗಿದೆ.

ಈಗಾಗಲೇ ಹತ್ತಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಎನ್‌ಡಿಆರ್‌ಎಫ್‌ ಪಡೆಗಳು ಹಲವು ಕಡೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

ಮುಚ್ಚಿದ ಶಾಲೆಗಳು: ಭಾರಿ ಮಳೆಯ ಹಿನ್ನಲೆಯಲ್ಲಿ ಮುಂಬೈ, ಠಾಣೆ ಮತ್ತು ಪಾಲ್ಘರ್‌ನಲ್ಲಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಿಗೆ ಸೋಮವಾರ(ಜುಲೈ 6) ರಜೆ ಘೋಷಿಸಲಾಗಿದೆ.

ಹತ್ತಕ್ಕೂ ಅಧಿಕ ಮಂದಿ ಮೃತ: ಮಹಾಮಳೆಯಿಂದಾಗಿ ಜೂನ್ 30ರ ನಂತರ ವಿವಿಧ ಘಟನೆಗಳಲ್ಲಿ ಹತ್ತಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಜುಲೈ 5ರ ರಾತ್ರಿ ಸುರಿದ ಭಾರಿ ಮಳೆಗೆ ಮನ್‌ಖುರ್ದ್ ಪ್ರದೇಶದಲ್ಲಿರುವ ಬಹುಮಹಡಿ ವಸತಿ ಕಟ್ಟಡ ಕುಸಿದು, ಆರು ಜನರು ಸಾವಿಗೀಡಾಗಿದ್ದಾರೆ.

ವಿಮಾನ ಸಂಚಾರದಲ್ಲಿ ವ್ಯತ್ಯಯ: ಭಾರಿ ಮಳೆಯಿಂದಾಗಿ ವಿಮಾನ ಸಂಚಾರದಲ್ಲಿ ಕೂಡ ವ್ಯತ್ಯಯ ಉಂಟಾಗಿದೆ. ಇಂಡಿಗೊ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಮುಂಬೈ ಪ್ರಯಾಣವನ್ನು ರದ್ದುಗೊಳಿಸಿದ್ದು, ಕೆಲವು ವಿಮಾನಗಳನ್ನು ಹತ್ತಿರದ ನಿಲ್ದಾಣಗಳಿಗಳಲ್ಲಿ ನಿಲ್ಲಿಸಲಾಗುತ್ತಿದೆ. ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯನ್ನು ಕೂಡ ಕೆಲಕಾಲ ಮುಚ್ಚಲಾಗಿತ್ತು.

ರೈಲು ಸಂಚಾರ ರದ್ದು: ಮಳೆಯಿಂದಾಗಿ ಭೋರ್ ಘಾಟ್ ವಿಭಾಗದ ಕರ್ಜತ್-ಲೋನಾವಾಲಾ ಬಳಿ ಭೂಕುಸಿತ ಸಂಭವಿಸಿದ್ದು, ಇದರಿಂದಾಗಿ ಮುಂಬೈ-ಪುಣೆ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ದೂರ ಪ್ರದೇಶಗಳಿಗೆ ತೆರಳಬೇಕಿದ್ದ ರೈಲು ಮತ್ತು ಉಪನಗರ ರೈಲು ಸಂಚಾರವನ್ನು ಕೂಡ ನಿಲ್ಲಿಸಲಾಗಿದೆ.

ರಸ್ತೆ ಸಂಚಾರಕ್ಕೂ ಅಡ್ಡಿ: ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿ ಬಳಿಯ ಖೋಪೋಲಿ-ಕುಸ್ಗಾಂವ್ ಸಮೀಪದ 'ಮಿ‌ಸ್ಸಿಂಗ್ ಲಿಂಕ್' ಟನಲ್‌-2 ಬಳಿ ಭೂಕುಸಿತ ಸಂಭವಿಸಿದ್ದರಿಂದ ಸೋಮವಾರ(ಜುಲೈ 6) ಬೆಳಿಗ್ಗೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲಿ ಸಿಲುಕಿದ್ದ ಪ್ರಯಾಣಿಕರಿಗೆ ಬೇರೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅನಗತ್ಯ ಪ್ರಯಾಣ ಮಾಡಬೇಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಮುಂಬೈ-ಪುಣೆ ಹೆದ್ದಾರಿ ಮತ್ತು ಹಳೆ ಹೆದ್ದಾರಿಯಲ್ಲಿನ ಸಂಚಾರವನ್ನು ಮುಂದಿನ ಆದೇಶದವರೆಗೆ ತಡೆಯಿಡಿಯಲಾಗಿದೆ ಎಂದು ಹೇಳಿದ್ದಾರೆ.

ನೌಕರರಿಗೆ ಮನೆಯಿಂದಲೇ ಕೆಲಸ: ಮುಂಬೈನಲ್ಲಿರುವ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್‌ ಫ್ರಮ್ ಹೋಮ್ ಮಾಡುವಂತೆ ಸೂಚಿಸಲಾಗಿದೆ. ಅನಿವಾರ್ಯವಲ್ಲದ ಮತ್ತು ಅರೆ-ಸರ್ಕಾರಿ ಕಚೇರಿಗಳ ಸಿಬ್ಬಂದಿಗಳಿಗೆ ಅರ್ಧದಿನ ರಜೆ ಘೋಷಿಸಲಾಗಿದೆ.

ವಿಧಾನಸಭೆ ಅಧಿವೇಶನ ಮುಂದೂಡಿಕೆ: ಮುಂಬೈನಲ್ಲಿ ಭಾರೀ ಮಳೆ ಬರುತ್ತಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನವನ್ನು ಒಂದು ದಿನದ ಮಟ್ಟಿಗೆ ಮುಂದೂಡಿಕೆ ಮಾಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries