ಕಾಸರಗೋಡು: ಎಟಿಎಂ ಕೌಂಟರಿನ ಗಾಜು ಒಡೆದು ದೇಹಕ್ಕೆ ಬಿದ್ದು ಮಂಗಳೂರಿನಲ್ಲಿ ಬೇಂಕ್ ನೌಕರಿಯಲ್ಲಿದ್ದ ಕಾಞಂಗಾಡು ನಿತ್ಯಾನಂದ ಆಶ್ರಮ ಪರಿಸರ ನಿವಾಸಿ ಬಾಲಕೃಷ್ಣ(56) ಮೃತಪಟ್ಟಿದ್ದಾರೆ.ಇವರು ಕರ್ನಾಟಕ ಕೋ-ಆಪರೇಟಿವ್ ಬೇಂಕಿನ ಮಂಗಳೂರು ಶಾಖೆಯ ನೌಕರನಾಗಿದ್ದರು.
ಬ್ಯಾಂಕ್ ನ ಕರ್ತವ್ಯ ಮುಗಿಸಿ ಕಚೇರಿ ಪಕ್ಕದ ಎಟಿಎಂ ಕೌಂಟರಿಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆ ಸಂದರ್ಭ ಸ್ಥಳದಲ್ಲಿ ಬೇರೆಯಾರೂ ಇಲ್ಲದಿದ್ದ ಹಿನ್ನೆಲೆಯಲ್ಲಿ ಬಹಳ ಹೊತ್ತಿನ ಬಳಿಕ ಗ್ರಾಹಕರೊಬ್ಬರು ಆಗಮಿಸಿದಾಗ ಮಾಹಿತಿ ತಿಳಿದು, ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮಂಗಳೂರಿನಲ್ಲಿ ವಾಸ್ತವ್ಯಹೂಡಿ, ವಾರಕ್ಕೆ ಒಂದುಬಾರಿ ಕಾಞಂಗಾಡಿನ ಮನೆಗೆ ತೆರಳುತ್ತಿದ್ದರು.


