ಕಾಸರಗೋಡು: ಸ್ಟೇಟ್ ರಿಸೋರ್ಸ್ ಸೆಂಟರ್ ಇಂಡಿಯಾ ಆಶ್ರಯದಲ್ಲಿ ನಡೆಸಲಾಗುವ ಎಸ್‍ಆರ್‍ಸಿ ಸಮುದಾಯ ಕಾಲೇಜಿನಲ್ಲಿ ಜುಲೈ ಸೆಶನ್‍ಗಿರುವ 'ಯೋಗ ಶಿಕ್ಷಕರ ತರಬೇತಿ ಡಿಪೆÇ್ಲಮಾ' ಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ. ಅಗತ್ಯವಿರುವ ಮೂಲ ಶೈಕ್ಷಣಿಕ ಅರ್ಹತೆ ಪ್ಲಸ್ ಟು (ಹೈಯರ್ ಸೆಕೆಂಡರಿ) ಅಥವಾ ತತ್ಸಮಾನವಾಗಿದ್ದು, ಅರ್ಜಿದಾರರು 18 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು. https://app.srcc.in/register ಲಿಂಕ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು.
ನಿರ್ದೇಶಕರು, ಸ್ಟೇಟ್ ರಿಸೋರ್ಸ್ ಸೆಂಟರ್ (State Resource Centre), ನಂದವನಂ, ವಿಕಾಸ್ ಭವನ್ ಪಿ.ಒ., ತಿರುವನಂತಪುರಂ - 33 ಎಂಬ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಯಾ ಮೊಬೈಲ್ ಸಂಖ್ಯೆ(04712325101, 8281114464)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

