HEALTH TIPS

ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರ‍್ಯಾಪ್ ಹಾಡುಗಾರ ಹನುಮ್ಯಾನ್‌ಕೈಂಡ್

ನವದೆಹಲಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ರ‍್ಯಾಪ್ ಹಾಡುಗಾರ ಹನುಮ್ಯಾನ್‌ಕೈಂಡ್ (ಸೂರಜ್ ಚೆರೂಕಾಟ್) ಅವರು ಜಂತರ್ ಮಂತರ್‌ನಲ್ಲಿನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಸದ್ಯ, ಈ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. 


ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಸಿಜೆಪಿ ಜುಲೈ 20ರಂದು ಸಂಸತ್‌ ಚಲೋ ಕರೆ ನೀಡಲಾಗಿತ್ತು. ಈ ಪ್ರತಿಭಟನೆಯಲ್ಲಿ ದೇಶ ವಿದೇಶದಿಂದಲೂ ಆಗಮಿಸಿದ್ದ ಸಾವಿರಾರು ವಿದ್ಯಾರ್ಥಿಗಳ ಜೊತೆಯಲ್ಲಿ ಸೂರಜ್ ಚೆರೂಕಾಟ್ ಅವರು ಭಾಗಿಯಾಗಿದ್ದಾರೆ. ಜಂತರ್ ಮಂತರ್‌ನಪ್ರತಿಭಟನೆಯ ಕ್ಷಣಗಳನ್ನು ಅವರು ಹನುಮ್ಯಾನ್‌ಕೈಂಡ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು, 'ತುಂಬಾ ವಿಶೇಷ ದಿನ' ಎಂದು ಬರೆದುಕೊಂಡಿದ್ದಾರೆ.

'ಸೂರಜ್ ಅವರು ಈ ಪ್ರತಿಭಟನೆಯಲ್ಲಿ ಯುವಕರ ಪರ ಧ್ವನಿ ಎತ್ತಿರುವುದು ಸಿಜೆಪಿಯ ಪ್ರತಿಭಟನೆಗೆ ಮತ್ತಷ್ಟು ಉತ್ತೇಜನ ನೀಡಿದೆ' ಎಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಚಳವಳಿಯಲ್ಲಿ ಅವರು ಭಾಗಿಯಾಗಿ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿರುವುದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಬಿಗ್ ಡಾಗ್ಸ್' ಹಾಡಿನ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ. ಇತ್ತಿಚೇಗೆ ಅವರು 'ಧುರಂಧರ್' ಚಿತ್ರದ ಟ್ರ್ಯಾಕ್ ಗೀತೆಗೆ ಧ್ವನಿ ನೀಡಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries