ಬದಿಯಡ್ಕ: ಬೇಳ ಗ್ರಾಮ ಕಚೇರಿಯ ಮುಂಭಾಗದ ಬಾಗಿಲು ಒಡೆದು ಕದ್ದ ಮೂರು ಲ್ಯಾಪ್‍ಟಾಪ್‍ಗಳು ಪೊದೆಗಳಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಲ್ಯಾಪ್‍ಟಾಪ್‍ಗಳು ಪತ್ತೆಯಾಗಿದ್ದು, ಬದಿಯಡ್ಕ ಪೋಲೀಸರು ಘಟನೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಜುಲೈ 20, ರಂದು ಸಂಜೆ 5.20 ರಿಂದ ಜುಲೈ 21 ರಂದು ಬೆಳಿಗ್ಗೆ 10 ಗಂಟೆಯ ನಡುವೆ ಕಳ್ಳತನ ನಡೆದಿದೆ ಎಂದು ದೂರು ನೀಡಲಾಗಿದೆ. ಕಳ್ಳರು ಗ್ರಾಮ ಕಚೇರಿಯ ಮುಂಭಾಗದ ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿದ್ದರು. ಕಚೇರಿಯಲ್ಲಿ ಇರಿಸಲಾಗಿದ್ದ ಮೂರು ಸರ್ಕಾರಿ ಲ್ಯಾಪ್‍ಟಾಪ್‍ಗಳನ್ನು ಕಳವು ಮಾಡಲಾಗಿತ್ತು.
ಬೇಳ ಗ್ರಾಮ ಅಧಿಕಾರಿ ಪಿ.ಎಸ್. ಶಶಿ ಅವರು ನೀಡಿದ ದೂರಿನ ಆಧಾರದ ಮೇಲೆ, ಕಳ್ಳತನದ ಕುರಿತು ಭಾರತೀಯ ದಂಡ ಸಂಹಿತೆ (ಐಪಿಸಿ) 2023 ರ ಸೆಕ್ಷನ್ 305(ಇ), 331(4) ಮತ್ತು 334(1) ರ ಅಡಿಯಲ್ಲಿ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಲ್ಯಾಪ್‍ಟಾಪ್ ಅನ್ನು ಕದ್ದು ಬಿಟ್ಟು ಹೋದವರು ಯಾರು ಎಂಬುದು ಪತ್ತೆಯಾಗಿಲ್ಲ ಮತ್ತು ತನಿಖೆ ಮುಂದುವರೆದಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.



