ನವದೆಹಲಿ: ಸಂಸತ್ನ ಮುಂಗಾರು ಅಧಿವೇಶನವು ಇಂದಿನಿಂದ (ಸೋಮವಾರ) ಆರಂಭಗೊಳ್ಳಲಿದ್ದು ನೀಟ್ ಪ್ರಶ್ನಾಪತ್ರಿಕೆ ಸೋರಿಕೆ, ಸೋನಮ್ವಾಂಗ್ಚುಕ್ ಪ್ರತಿಭಟನೆ, ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು, ಇಂಧನಕ್ಕೆ ಎಥೆನಾಲ್ ಮಿಶ್ರಣ ಹಾಗೂ ವಿದೇಶ ನೀತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಇದರೊಂದಿಗೆ ಮುಂಗಾರು ಅಧಿವೇಶನವು ಆಳುವ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಭಾರೀ ವಾಕ್ಸಮರ ನಡುವೆ ಸಾಧ್ಯತೆಗಳು ದಟ್ಟವಾಗಿವೆ.
ಎಪ್ರಿಲ್ನಲ್ಲಿ ನಡೆದ ಸಂಸತ್ ಅಧಿವೇಶನದ ಬಳಿಕ ಕನಿಷ್ಠ 37 ಪ್ರತಿಪಕ್ಷ ಸಂಸದರು ತಮ್ಮ ನಿಷ್ಠೆಯನ್ನು ಬಿಜೆಪಿ ನೇತೃತ್ವದ ಎನ್ಡಿಎಗೆ ಬದಲಾಯಿಸಿದ ಬಳಿಕ ಈ ಅಧಿವೇಶನ ನಡೆಯುತ್ತಿದೆ. ಇದರಿಂದಾಗಿ ಮಹಿಳಾ ಮೀಸಲಾತಿ ಕಾಯ್ದೆಯನ್ನು ಸದನದಲ್ಲಿ ಮರು ಮಂಡಿಸಲು ಹೊರಟಿರುವ ಕೇಂದ್ರ ಸರಕಾರಕ್ಕೆ, ಮಸೂದೆಯ ಜಾರಿಗೆ ಬೇಕಾದ ಸಂಖ್ಯಾಬಲವನ್ನು ವರ್ಧಿಸಿಕೊಳ್ಳಲು ಸಾಧ್ಯವಾಗಲಿದೆಯ
ರವಿವಾರ ನಡೆದ ಸರ್ವಪಕ್ಷಸಭೆಗೆ ಟಿಎಂಸಿಯ ಬಂಡುಕೋರ ಬಣ ವಿಲೀನಗೊಂಡಿರುವ ನ್ಯಾಶನಲ್ ಸಿಟಿಝನ್ಸ್ ಪಾರ್ಟಿ ಆಫ್ ಇಂಡಿಯಾವನ್ನು ಆಹ್ವಾನಿಸಿದ್ದನ್ನು ವಿರೋಧಿಸಿ, ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ್ದವು. ಇಂಡಿಯಾ ಮೈತ್ರಿಕೂಟದ ಸಭೆಗಳಲ್ಲಿ ಭಾಗವಹಿಸದಿರುವ ಡಿಎಂಕೆ ಹಾಗೂ ಆಮ್ ಆದ್ಮಿ ಪಕ್ಷಗಳು ಕೂಡಾ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸಿದ್ದವು.

