ಕಾಸರಗೋಡು: ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಆರನೇಯ ಚಾತುರ್ಮಾಸ್ಯ ಜುಲೈ 29ರಿಂದ ಸೆಪ್ಟಂಬರ್ 26ರವರೆಗೆ ಶ್ರೀಮಠದಲ್ಲಿ ನಡೆಯಲಿರುವುದು. ಕಾರ್ಯಕ್ರಮದ ಪ್ರಚಾರಕ್ಕೆ ಸಂಬಂಧಿಸಿದಂತೆ ಹಾಗೂ ಎಡನೀರು ಶ್ರೀಮಠಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸ್ವಾಗತವನ್ನು ಬಯಸುವ ನಿಟ್ಟಿನಲ್ಲಿ ಸ್ವಾಗತ ಫಲಕ(ಬ್ಯಾನರ್)ಗಳನ್ನು ವಿವಿಧ ಪ್ರದೇಶಗಳಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಪ್ರಾಯೋಜಕರಾಗಿ ವೈಯುಕ್ತಿಕವಾಗಿ ಅಥವಾ ಸಂಘಸಂಸ್ಥೆಗಳ ಮುಖಾಂತರ ತಮ್ಮನ್ನು ತೊಡಗಿಸಿಕೊಳ್ಳಬಹುದಾಗಿದೆ. ಈಬಗ್ಗೆ ಮಾಹಿತಿಗಾಗಿ ಮೊಬೈಲ್ ಸಂಕ್ಯೆ(9946941753, 9447693001)ಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

