ಕುಂಬಳೆ: ಕುಂಬಳೆಯ ಬೇಳ ಪಬ್ಲಿಕ್ ವೆಲ್ಫೇರ್ ಸಹಕಾರಿ ಸಂಘದ ಅಧ್ಯಕ್ಷರಾಗಿ ಹಿರಿಯ ವಕೀಲ ಥಾಮಸ್ ಡಿಸೋಜಾ ಹಾಗೂ ರಿಚರ್ಡ್ ಕ್ರಾಸ್ತಾ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವಕೀಲ ಥಾಮಸ್ ಡಿಸೋಜಾ ಅವರು ಈ ಹಿಂದೆ 2016ರಿಂದ 2021ರವರೆಗೆ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಪಾರದರ್ಶಕ ಆಡಳಿತ, ಆರ್ಥಿಕ ಶಿಸ್ತು ಹಾಗೂ ಸದಸ್ಯರ ಕಲ್ಯಾಣಕ್ಕೆ ಆದ್ಯತೆ ನೀಡುವ ಮೂಲಕ ಸಂಘವನ್ನು ಪ್ರಗತಿಯ ಪಥದತ್ತ ಕೊಂಡೊಯ್ದಿದ್ದರು.


