HEALTH TIPS

ಮಾದಕ ವಸ್ತು ಜಾಲ ವಿರುದ್ಧ ಗಡಿಪ್ರದೇಶದಲ್ಲಿ ಚುರುಕುಗೊಂಡ ಕಾರ್ಯಾಚರಣೆ-ಹಲವರ ಬಂಧನ

ಕಾಸರಗೋಡು: ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವವರು ಹಾಗೂ ಮಾದಕ ವಸ್ತು ಜಾಲಗಳ (ಡ್ರಗ್ ಮಾಫಿಯಾ) ವಿರುದ್ಧ ಪೆÇಲೀಸರು ನಡೆಸುತ್ತಿರುವ ಕಾರ್ಯಚರಣೆಯನ್ವಯ ರಾಜ್ಯದ ಗಡಿಯುದ್ದಕ್ಕೂ ಇರುವ 14 ಪ್ರಮುಖ ಗಡಿಪ್ರದೇಶದಲ್ಲಿ ಶನಿವಾರ ಏಕ ಕಾಲಕ್ಕೆ ನಡೆಸಿರುವ ಕಾರ್ಯಾಚರಣೆಯಲ್ಲಿ 1,962 ವಾಹನಗಳ ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ ಇತರ ರಾಜ್ಯಗಳಿಂದ ಆಗಮಿಸಿದ್ದ 336 ವಾಹನಗಳು ಒಳಗೊಂಡಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇರಿಸಲು 49 ಸಂಚಾರಿ ಗಸ್ತು ತಂಡವನ್ನೂ ಜಿಲ್ಲಾ ಪೊಲೀಸ್ ನಿಯೋಜಿಸಿದೆ. 


ವಿವಿಧ ಪ್ರಕರಣಗಳಲ್ಲಿ ವಾರಂಟ್ ಆರೋಪಿಗಳಾಗಿರುವ ಏಳು ಮಂದಿ ಹಾಗೂ ಜಾಮೀನು ರಹಿತ ವಾರಂಟ್ ಅನ್ವಯ ಐವತ್ತು ಮಂದಿಯನ್ನು ಬಂಧಿಸಲಾಗಿದೆ

ಮಾದಕ ದ್ರವ್ಯ ಮತ್ತು ಕುಡಿದು ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮದನ್ವಯ ಒಟ್ಟು 12 ಪ್ರಕರಣಗಳು ದಾಖಲಾಗಿವೆ.  ಚಂದೇರಾ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾತ್ರ ಐದು ಪ್ರಕರಣ ದಾಖಲಾಗಿದೆ.  ರಸ್ತೆ ಅಪಘಾತ ಕಡಿಮೆ ಮಾಡುವ ಗುರಿಯನ್ವಯ ಕಾರ್ಯಾಚರಣೆ ನಡೆಸಲಾಗಿದೆ. ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ 42 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅನುಮಾನಾಸ್ಪದ ರೀತಿಯಲ್ಲಿ ಕಂಡುಬಂದ 80 ಜನರ ವಿರುದ್ಧ ಮತ್ತು ಕಾನೂನು ಉಲ್ಲಂಘನೆಗಳಿಗಾಗಿ 46 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಕುಂಬಳೆ ಠಾಣೆ ಪೆÇಲೀಸರು ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯ ಸಮಯದಲ್ಲಿ, ಕುಂಬಳ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ  ತಲೆಮರೆಸಿಕೊಂಡಿದ್ದ ಅಜನೂರು ತೆಕ್ಕೆಪ್ಪುರಂ ಮೂಲದ ಸಮೀರ್ ಟಿ.ಎಂ. (39)ಎಂಬಾತನನ್ನು ಹೊಸದುರ್ಗ ಪೆÇಲೀಸರು ಬಂಧಿಸಿದ್ದಾರೆ.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries