ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ವನ್ ತರಗತಿಯ ಪ್ರವೇಶೋತ್ಸವ ನಡೆಯಿತು. ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎ. ತಾಜುದ್ದೀನ್ ಕಾರ್ಯಕ್ರಮ ಉದ್ಘಾಟಿಸಿದರು. ಮೀಂಜ ವಾರ್ಡು ಸದಸ್ಯ ಸಿದ್ದಿಕ್. ಕೆ.ಎಂ, ಮುಖ್ಯೋಪಾಧ್ಯಾಯಿನಿ ಮೃದುಲ. ಕೆ.ಎಂ, ಮಿಂಜ ಸರ್ಕಾರಿ ಆಸ್ಪತ್ರೆಯ ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ ನಾಝಿಲ ಶುಭಾಶಂಸನೆಗೈದರು. ಶಾಲಾ ಪ್ರಬಂಧಕ ಡಾ. ಜಯಪ್ರಕಾಶ ನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಯಾರಿಯರ್ ಗೈಡೆನ್ಸ್ ಹಾಗೂ ಸೌಹೃದ ಕ್ಲಬ್ ಸಂಚಾಲಕಿ ಗೀತಾ ಹಾಗೂ ಜಯಕೃಷ್ಣನ್ ರಕ್ಷಕರಿಗೆ ತರಗತಿಯನ್ನು ನಡೆಸಿಕೊಟ್ಟರು. ಅಧ್ಯಾಪಕರಾದ ರವಿಲೋಚನ. ಸಿ.ಎಚ್ ಸ್ವಾಗತಿಸಿ, ಮಿನಿ ಜೋಸೆಫ್ ವಂದಿಸಿದರು. ಹರೀಶ.ಜಿ. ನಿರೂಪಿಸಿದರು.

.jpg)
