ಬದಿಯಡ್ಕ: ಕ್ಯಾಂಪ್ಕೋ ಸದಸ್ಯರ ಶೈಕ್ಷಣಿಕ ಸಹಾಯ ನಿಧಿ ಯೋಜನೆಯಡಿ ಉನ್ನತ ಶಿಕ್ಷಣ ವೆಚ್ಚಕ್ಕಾಗಿ ಅಂಬಲತ್ತರದ ಸದಸ್ಯ ಕುಞÂ್ಞಕಣ್ಣ ಪಿ. ವಿ. ಅವರ ಪುತ್ರಿ ನಂದನಾ ವಿ. ಪಿ. ಅವರಿಗೆ ಮೊದಲ ಕಂತಿನ ಶಿಕ್ಷಣ ನೆರವು ರೂ 50,000ದ ನೆರವಿನ ಚೆಕ್ ವಿತರಿಸಲಾಯಿತು. ಕ್ಯಾಂಪ್ಕೋ ನಿರ್ದೇಶಕ ರಾಧಾಕೃಷ್ಣನ್ ಕೆ., ಗಣೇಶ್ ಪಾರೆಕ್ಕಟ್ಟ, ವಿವೇಕಾನಂದ ಗೌಡ ಪಿ. ಹಸ್ತಾಂತರಿಸಿದರು. ಕ್ಯಾಂಪ್ಕೋ ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಎಂ. ಹಾಗೂ ಕ್ಯಾಂಪ್ಕೋ ಕಾಂಞಂಗಾಡ್ ಶಾಖೆಯ ಸಿಬ್ಬಂದಿ ಉಪಸ್ಥಿತರಿದ್ದು, ವಿದ್ಯಾರ್ಥಿನಿಯ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು.

.jpg)
