HEALTH TIPS

ಬ್ರಿಟನ್‌ ನಲ್ಲಿ ಲೇಬರ್ ನಾಯಕತ್ವ ಚುನಾವಣೆ ಆರಂಭ; ಆಯಂಡಿ ಬರ್ನ್ ಹ್ಯಾಮ್ ಅವಿರೋಧ ಆಯ್ಕೆಯಾಗುವ ಸಾಧ್ಯತೆ

 ಲಂಡನ್: ಬ್ರಿಟನ್‌ನ ಆಡಳಿತಾರೂಢ ಲೇಬರ್ ಪಕ್ಷವು ತನ್ನ ಮುಂದಿನ ನಾಯಕನ ಆಯ್ಕೆ ಪ್ರಕ್ರಿಯೆಯನ್ನು ಗುರುವಾರ ಅಧಿಕೃತವಾಗಿ ಆರಂಭಿಸಿತು. ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ ಘೋಷಿಸಿದ ಹಿನ್ನೆಲೆಯಲ್ಲಿ, ಗ್ರೇಟರ್ ಮ್ಯಾಂಚೆಸ್ಟರ್‌ ನ ಮಾಜಿ ಮೇಯರ್ ಹಾಗೂ ಮೇಕರ್‌ಫೀಲ್ಡ್ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ಸಂಸದ ಆಯಂಡಿ ಬರ್ನ್ ಹ್ಯಾಮ್ ಮುಂದಿನ ಪಕ್ಷದ ನಾಯಕರಾಗಿ ಹಾಗೂ ಬ್ರಿಟನ್‌ನ ಪ್ರಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಗಳು ತಿಳಿಸಿವೆ. 


ಕಳೆದ ತಿಂಗಳು ಕೀರ್ ಸ್ಟಾರ್ಮರ್ ರಾಜೀನಾಮೆ ಘೋಷಿಸಿದ ಬಳಿಕ, ನಾಯಕತ್ವ ಸ್ಪರ್ಧೆಯಲ್ಲಿ ಆಯಂಡಿ ಬರ್ನ್ ಹ್ಯಾಮ್ ಮಾತ್ರ ಉಳಿದಿದ್ದಾರೆ. ಸ್ಪರ್ಧೆಗೆ ಅಗತ್ಯವಿರುವಷ್ಟು ಬೆಂಬಲವನ್ನು ಬೇರೆ ಯಾವುದೇ ಅಭ್ಯರ್ಥಿ ಪಡೆಯದಿದ್ದರೆ, ಅವರು ಅವಿರೋಧವಾಗಿ ಲೇಬರ್ ಪಕ್ಷದ ನಾಯಕರಾಗಿ ಆಯ್ಕೆಯಾಗಲಿದ್ದಾರೆ. ಅದರೊಂದಿಗೆ ಬ್ರಿಟನ್‌ ನ ಮುಂದಿನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ನಿರೀಕ್ಷೆಯಿದೆ.

ಲೇಬರ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ (ಎನ್‌ಇಸಿ) ಅನುಮೋದಿಸಿರುವ ವೇಳಾಪಟ್ಟಿಯಂತೆ, ಅಭ್ಯರ್ಥಿಗಳು ಜುಲೈ 15ರೊಳಗೆ ಪಕ್ಷದ ಕನಿಷ್ಠ 81 ಸಂಸದರ ನಾಮನಿರ್ದೇಶನ ಪಡೆಯಬೇಕು. ಇದುವರೆಗೆ ಆಯಂಡಿ ಬರ್ನ್ ಹ್ಯಾಮ್ ಮಾತ್ರ ಏಕೈಕ ಅಭ್ಯರ್ಥಿಯಾಗಿದ್ದು, ನಾಮನಿರ್ದೇಶನ ಪ್ರಕ್ರಿಯೆ ಔಪಚಾರಿಕತೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ.

ತಮ್ಮ ಆದ್ಯತೆಗಳನ್ನು ವಿವರಿಸಿರುವ ಆಯಂಡಿ ಬರ್ನ್ ಹ್ಯಾಮ್, "ರಕ್ಷಣಾ ವೆಚ್ಚವನ್ನು ಹೆಚ್ಚಿಸುವುದು, ಸ್ಥಳೀಯ ಉದ್ಯಮಗಳನ್ನು ಪುನರುಜ್ಜೀವನಗೊಳಿಸುವುದು ಹಾಗೂ ನಮ್ಮ ಮೈತ್ರಿಕೂಟವನ್ನು ಬಲಪಡಿಸುವ ಮೂಲಕ ಬ್ರಿಟನ್‌ ನ ರಕ್ಷಣೆಯನ್ನು ಮತ್ತಷ್ಟು ಸದೃಢಗೊಳಿಸುವುದೇ ನನ್ನ ಮೊದಲ ಆದ್ಯತೆ" ಎಂದು ಹೇಳಿದ್ದಾರೆ.

ವಿಕೇಂದ್ರೀಕೃತ ಆಡಳಿತ ಮಾದರಿಗೆ ಹೆಚ್ಚಿನ ಒತ್ತು ನೀಡುವುದಾಗಿಯೂ ಅವರು ಪ್ರತಿಜ್ಞೆ ಮಾಡಿದ್ದಾರೆ. 












ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries