ಕಾಸರಗೋಡು: ನುಳ್ಳಿಪ್ಪಾಡಿಯ "ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸ್ಥಾಪನೆಗೊಂಡು 25 ವರ್ಷ ಪೂರೈಸುತ್ತಿದ್ದು, ರಜತ ಸಂಭ್ರಮ ಕಾರ್ಯಕ್ರಮದ ಸಮಾರೋಪ ಜುಲೈ 26ರಂದು ಜರುಗಲಿದೆ. ರಜತ ಸಂಭ್ರಮದ ಅಂಗವಾಗಿ ಕರ್ನಾಟಕ-ಕೇರಳ ರಾಜ್ಯದಲ್ಲಿ 40ಕ್ಕೂ ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಮಾರೋಪ ಕಾರ್ಯಕ್ರಮವನ್ನು ನುಳ್ಳಿಪ್ಪಾಡಿ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. ರಜತಸಂಭ್ರಮದ ಸ್ಮರಣಾರ್ಥ ಹೊಸ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಕಾರ್ಯಕ್ರಮ ಯಶಸ್ವಿಗಾಗಿ ಸಮಿತಿಯನ್ನು ಕನ್ನಡ ಭವನ ಕೇಂದ್ರ ಸಮಿತಿಯ ನೇತೃತ್ವದಲ್ಲಿ ರಚಿಸಲಾಗಿದೆ.
ನುಳ್ಳಿಪ್ಪಾಡಿಯಲ್ಲಿ ಜು. 26ರಂದು ನಡೆಯಲಿರುವ ಸಮ್ಮೇಳನದಲ್ಲಿ ಧಾರ್ಮಿಕ, ಸಾಮಾಜಿಕ, ಸಾಹಿತ್ತಿಕ, ಶೈಕ್ಷಣಿಕ ಪೆÇೀಷಕ ಕೆ.ಎನ್ ವೆಂಕಟ್ರಮಣ ಹೊಳ್ಳ ಅವರನ್ನು ಸಮ್ಮೇಳನದ ಸಮಿತಿ ಅಧ್ಯಕ್ಷರನ್ನಾಗಿ ಕೇಂದ್ರ ಸಮಿತಿ ಆಯ್ಕೆ ಮಾಡಿದೆ.


