HEALTH TIPS

ಭಾರತೀಯ ಮಜ್ದೂರ್ ಸಂಘ ಕಾಸರಗೋಡು ನಗರಸಭಾ ಸಮಿತಿ ಸಮ್ಮೇಳನ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ಕಾಸರಗೋಡು ನಗರಸಭಾ ಸಮಿತಿ ಸಮ್ಮೇಳನ  ಕಾಸರಗೋಡು ನಗರಸಭಾ  ಸಭಾಂಗಣದಲ್ಲಿ ಜರುಗಿತು. ಬಿಎಂಎಸ್ ಕಾಸರಗೋಡು ವಲಯ ಸಮಿತಿ ಅಧ್ಯಕ್ಷ ಬಾಲಕೃಷ್ಣ ನೆಲ್ಲಿಕುನ್ನು ಉದ್ಘಾಟಿಸಿದರು. ಕೆ.ಕಮಲಾಕ್ಷ ಸಭೆಯ ಅಧ್ಯಕ್ಷತೆ ವಹಿಸಿ,ದ್ದರು.   


ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ.ನಾಯರ್ ಮುಖ್ಯ ಭಾಷಣ ಮಾಡಿದರು. ಮಧೂರು ಗ್ರಾಮ ಪಂಚಾಯಿತಿ ಸದಸ್ಯ ವಸಂತ ಅಯ್ಯಪ್ಪ ನಗರ, ನಗರಸಭಾ ಸದಸ್ಯರಾದ ಕೆ.ಆರ್. ಹರೀಶ್ ಮತ್ತು ಕೆ.ರೇಷ್ಮಾ ಉಪಸ್ಥಿತರಿದ್ದರು.  ಬಿಎಂಎಸ್ ಮುನ್ಸಿಪಲ್ ಜಂಟಿ ಕಾರ್ಯದರ್ಶಿ ಕೆ. ಸೌಮ್ಯ ವರದಿ ಮಂಡಿಸಿದರು. ಕೆ. ಗುರುದಾಸ್ ಸಂಘಟನಾ ಚರ್ಚೆ ನಿರ್ವಹಿಸಿದರು. ಈ ಸಂದರ್ಭ ಮುಂದಿನ ಮೂರು ವರ್ಷಗಳ ಕಾಲಾವಧಿಗಿರುವ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರ ಕೊಟ್ಟಕ್ಕಣಿ ಸಮಾರೋಪ ಭಾಷಣ ಮಾಡಿದರು. ಸಭೆಯಲ್ಲಿ, ಆದ್ವಿ ಬಿ.ಎಸ್  ವಂದೇ ಮಾತರಂ,  ಬಾಬುಮೋನ್ ಚೆಂಗಲ 'ಮಜ್ದೂರ್ ಗೀತೆ ಹಾಡಿದರು. ಕೆ. ಮನೋಜ್ ಸ್ವಾಗತಿಸಿದರು, ಕೆ. ಅರುಣ್ ವಂದಿಸಿದರು. 

ಎ.ಕೇಶವ ಅಧ್ಯಕ್ಷರು, ಕಮಲಾಕ್ಷ, ವೀಣಾ ನೆಲ್ಲಿಕುನ್ನು, ಚಿತ್ರಾ ಗಂಗಾಧರ, ಮೋಹನ್ ದಾಸ್ ಕೊರಕ್ಕೋಡ್ ಉಪಾಧ್ಯಕ್ಷರು; ಮನೋಜ್ ಅಣಂಗೂರು ಕಾರ್ಯದರ್ಶಿ,  ಪ್ರಸಾದ್, ವಿನಿಲ್, ಸೌಮ್ಯ, ರಮೇಶ್ ಕಡಪ್ಪುರ ಜತೆ ಕಾರ್ಯದರ್ಶಿಗಳು,  ಕೆ.ಅರುಣ್ ಕೋಶಾಧಿಕಾರಿ,  ಅಶೋಕ್, ಆದರ್ಶ್, ಪ್ರಮೀಳಾ ಬೀರಂತಬೈಲ್, ಸ್ವಾತಿ ಕೊರಕ್ಕೋಡ್, ಗೋಪಾಲ್ ನೆಲ್ಲಿಕುನ್ನು, ನವೀನ್, ಗಿರೀಶ್, ಜನಾರ್ದನನ್ ಕಡಪ್ಪುರಂ ಅವರನ್ನು ಸದಸ್ಯರನ್ನಗಿ ಆಯ್ಕೆ ಮಾಡಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries