HEALTH TIPS

ಡೊನಾಲ್ಡ್ ಟ್ರಂಪ್ ಹತ್ಯೆಗೆ ಇರಾನ್‍ನಿಂದ `ಹೊಸ' ಸಂಚು : ವರದಿ

 ವಾಶಿಂಗ್ಟನ್ : ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಇರಾನ್ ರೂಪಿಸಿರುವ ಹೊಸ ಮತ್ತು `ನಿರ್ದಿಷ್ಟ' ಯೋಜನೆಯ ಬಗ್ಗೆ ಇಸ್ರೇಲ್ ಈ ವಾರ ಅಮೆರಿಕದೊಂದಿಗೆ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಗುರುವಾರ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. 


ಇತ್ತೀಚೆಗಷ್ಟೇ ನ್ಯಾಟೋ ಶೃಂಗಸಭೆಯ ನಂತರ ಟ್ರಂಪ್ ಅವರು ತುರ್ಕಿಯೆಯಿಂದ ಹೊರಡಲು ಹಳೆಯ ವಿಮಾನವನ್ನು ಬಳಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಟ್ರಂಪ್ ಅವರನ್ನು ಹತ್ಯೆ ಮಾಡುವ ಸಂಭವನೀಯ ಯೋಜನೆಗಳ ಬಗ್ಗೆ ವಾಶಿಂಗ್ಟನ್ ನಿರಂತರವಾಗಿ ಗುಪ್ತಚರ ಮಾಹಿತಿಯನ್ನು ಗಮನಿಸುತ್ತಿದೆ, ಆದರೆ ಇಸ್ರೇಲ್ ನೀಡಿದ ಎಚ್ಚರಿಕೆಯು ಹೊಸದಾಗಿದ್ದು, ನಿರ್ದಿಷ್ಟ ಸಂಚಿಗೆ ಸಂಬಂಧಿಸಿದ್ದಾಗಿದೆ' ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ.

ಬುಧವಾರ ತುರ್ಕಿಯೆಯ ಅಂಕಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ತಮ್ಮ ಪ್ರಾಣಕ್ಕೆ ಇರುವ ಬೆದರಿಕೆಗಳ ಬಗ್ಗೆ ಸುಳಿವು ನೀಡಿದ್ದರು. `ಇರಾನ್‍ನ ಹೊಸ ಹತ್ಯೆಯ ಪಟ್ಟಿಯಲ್ಲಿ ತಾವು ಅಗ್ರಸ್ಥಾನದಲ್ಲಿದ್ದೇವೆ ಎಂದು ಇತ್ತೀಚೆಗೆ ತಮಗೆ ತಿಳಿದುಬಂದಿದೆ. ಅವರು ಅಮೆರಿಕದ ನಾಯಕನನ್ನು, ಅಂದರೆ ನನ್ನನ್ನು ಮುಗಿಸಲು ಬಯಸಿದ್ದಾರೆ. ನಾನು ಪ್ರತಿಯೊಂದು ಪಟ್ಟಿಯಲ್ಲೂ ಇದ್ದೇನೆ. ಇಂದು ಬೆಳಿಗ್ಗೆ ನಾನು ನೋಡಿದೆ, ಅವರ ಪ್ರತಿಯೊಂದು ಪಟ್ಟಿಯಲ್ಲೂ ನನ್ನ ಹೆಸರಿದೆ. ಇಂದಿನವರೆಗೆ, ನಾನು ಸ್ವಲ್ಪಮಟ್ಟಿಗೆ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ, ಆದರೆ ಈ ಅದೃಷ್ಟ ಬಹುಶಃ ಬಹಳ ದಿನಗಳವರೆಗೆ ಉಳಿಯದೇ ಇರಬಹುದು. ಇವರು ದುಷ್ಟ, ವಿಕೃತ ಮನಸ್ಸಿನ ಜನರು. ನಾವು ಆ ಕ್ಯಾನ್ಸರ್ ಅನ್ನು ಬೇರುಸಹಿತ ಕಿತ್ತೊಗೆಯಬೇಕು. ಆ ಕ್ಯಾನ್ಸರ್ ಅನ್ನು ಆರಂಭದಲ್ಲೇ ಕತ್ತರಿಸಿ ಹಾಕಬೇಕು' ಎಂದು ಟ್ರಂಪ್ ಹೇಳಿದ್ದರು.

ಆದರೆ, ಅವರು ಇಸ್ರೇಲ್ ಇತ್ತೀಚೆಗೆ ಹಂಚಿಕೊಂಡಿದ್ದ ಗುಪ್ತಚರ ಮಾಹಿತಿಯನ್ನು ಉಲ್ಲೇಖಿಸಿ ಮಾತನಾಡುತ್ತಿದ್ದಾರೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ತುರ್ಕಿಯೆಯಲ್ಲಿ ಶೃಂಗಸಭೆ ನಡೆದ ನಂತರ ಅಲ್ಲಿಂದ ಹೊರಡಲು ಟ್ರಂಪ್ ತಮ್ಮ ಹಳೆಯ ಏರ್ ಫೋರ್ಸ್ ಒನ್ ವಿಮಾನವನ್ನು ಬಳಸಿದ್ದರು. ತಮಗೆ ಖತರ್ ಉಡುಗೊರೆಯಾಗಿ ನೀಡಿದ್ದ ಹೊಸ ಜೆಟ್ ವಿಮಾನವನ್ನು ಮೊದಲೇ ಬ್ರಿಟನ್‍ಗೆ ಕಳುಹಿಸಿದ್ದರು. ನಂತರ ವಾಶಿಂಗ್ಟನ್‍ಗೆ ಪ್ರಯಾಣಿಸಲು ಬ್ರಿಟನ್‍ನಲ್ಲಿ ಅವರು ವಿಮಾನವನ್ನು ಬದಲಾಯಿಸಿದರು.

ತುರ್ಕಿಯೆಯ ಗಡಿಗೆ ಹೊಂದಿಕೊಂಡಿರುವ ಇರಾನ್ ವಿರುದ್ಧ ಅಮೆರಿಕ ಹೊಸ ದಾಳಿಗಳನ್ನು ಪ್ರಾರಂಭಿಸಿದ ಸಮಯದಲ್ಲಿ ಈ ಬದಲಾವಣೆ ನಡೆದಿತ್ತು. ಭದ್ರತಾ ಮುನ್ನೆಚ್ಚರಿಕೆಯಾಗಿ ಅಮೆರಿಕದ ಗುಪ್ತಚರ ಸೇವೆಯ ಕೋರಿಕೆಯ ಮೇರೆಗೆ ಈ ಬದಲಾವಣೆ ಮಾಡಲಾಗಿದೆ ಎಂದು `ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries