ಸಮರಸ ಚಿತ್ರಸುದ್ದಿ: ಕಾಸರಗೋಡು: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಚಟುವಟಿಕೆ ನಡೆಸುತ್ತಿರುವ 'ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ' (ಪಿಐಬಿ) ಕೊಚ್ಚಿ ವತಿಯಿಂದ ಕಾಸರಗೋಡಿನ 'ಹೈವೇ ಕ್ಯಾಸಲ್' ಸಭಾಂಗಣದಲ್ಲಿ ಆಯೋಜಿಸಲಾಗಿದ್ದ'ಮಾಧ್ಯಮ ಕಾರ್ಯಾಗಾರ'ದಲ್ಲಿ ಪದ್ಮಭೂಷಣ ಬೆಳೇರಿ ಸತ್ಯನರಾಯಣ ಅವರನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಗೌರವಿಸಿದರು. ಐಬಿ ಕೇರಳ-ಲಕ್ಷದ್ವೀಪ ವಲಯ ಹೆಚ್ಚುವರಿ ಮಹಾನಿರ್ದೇಶಕ ವಿ. ಪಳನಿಚಾಮಿ ಐಐಎಸ್ ಉಪಸ್ಥಿತರಿದ್ದರು.


