ನ್ಯೂಜೆರ್ಸಿ: ಜಗತ್ತಿನಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ, ಪ್ರತಿಭಟನೆಯೊಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಭಾನುವಾರ ತಡರಾತ್ರಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ವೇಳೆ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ 'ರೆಡ್ ಕಾರ್ಡ್' ಪ್ರದರ್ಶಿಸುವ ಮೂಲಕ ಪ್ರತಿಭಟನೆಗೆ ಸೇರಿಕೊಳ್ಳುವಂತೆ ಪ್ರತಿಭಟನಾಕಾರರು ಸಾಕರ್ (ಪುಟ್‌ಬಾಲ್) ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ವಿವಿಧ ಕಲಾ ಸಂಘಟನೆಗಳು, ಸಮುದಾಯ ಸಂಘಟಕರು ಮತ್ತು ವಕೀಲರ ಗುಂಪುಗಳ ಒಕ್ಕೂಟವು ಜಂಟಿಯಾಗಿ ಈ ಅಭಿಯಾನವನ್ನು ಹಮ್ಮಿಕೊಂಡಿದ್ದು, ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳಿಗೆ ಹತ್ತಾರು ಸಾವಿರ ವಿಶೇಷವಾಗಿ ವಿನ್ಯಾಸಗೊಳಿಸಲಾದ 'ರೆಡ್ ಕಾರ್ಡ್'ಗಳನ್ನು ವಿತರಿಸಲು ಸಜ್ಜಾಗಿದೆ.
'ರೆಡ್ ಕಾರ್ಡ್' ಅಭಿಯಾನದ ಉದ್ದೇಶವೇನು?
ಈ ರೆಡ್ ಕಾರ್ಡ್‌ಗಳ ಮೇಲೆ ಲ್ಯಾಟಿನ್ ಭಾಷೆಯಲ್ಲಿ ವಿಶ್ವದ ಏಕತೆಯನ್ನು ಬಿಂಬಿಸುವ 'Unitas Mundi' (ವಿಶ್ವದ ಏಕತೆ) ಎಂಬ ಘೋಷವಾಕ್ಯವನ್ನು ಮುದ್ರಿಸಲಾಗಿದೆ. ಕ್ರೀಡಾಂಗಣದ ಒಳಗಡೆ ಸಾಮೂಹಿಕವಾಗಿ ರೆಡ್ ಕಾರ್ಡ್ ಪ್ರದರ್ಶಿಸಿ ಫಿಫಾ ಅಧ್ಯಕ್ಷರು ಮತ್ತು ಟ್ರಂಪ್ ಅವರ ವಿರುದ್ಧ ಆಕ್ರೋಶ ಹೊರಹಾಕಲು ಪ್ರೇರೇಪಿಸಲಾಗಿದೆ.
ಪ್ರತಿಭಟನೆಗೆ ಪ್ರಮುಖ ಕಾರಣಗಳು:
ರಾಜಕೀಯ ತಟಸ್ಥತೆ ಉಲ್ಲಂಘನೆ ಮತ್ತು ಪ್ರಶಸ್ತಿ ವಿವಾದ: ಫಿಫಾ ಅಧ್ಯಕ್ಷ ಇನ್ಫಾಂಟಿನೊ ಮತ್ತು ಟ್ರಂಪ್ ನಡುವಿನ ನಿಕಟ ಸಂಬಂಧ ಇತ್ತೀಚೆಗೆ ತೀವ್ರ ಟೀಕೆಗೆ ಗುರಿಯಾಗಿದೆ. ಡೊನಾಲ್ಡ್ ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗದ ಬೆನ್ನಲ್ಲೇ, ಫಿಫಾ ಇತಿಹಾಸದಲ್ಲೇ ಮೊದಲ ಬಾರಿಗೆ 'ಫಿಫಾ ಶಾಂತಿ ಪ್ರಶಸ್ತಿ'ಯನ್ನು ಸೃಷ್ಟಿಸಿ ಅದನ್ನು ಟ್ರಂಪ್‌ಗೆ ನೀಡಲಾಗಿತ್ತು. ಫೈನಲ್ ಪಂದ್ಯದ ವಿಜೇತರಿಗೆ ಟ್ರಂಪ್ ಅವರೇ ಟ್ರೋಫಿ ವಿತರಿಸಲಿದ್ದಾರೆ ಎಂದು ಇನ್ಫಾಂಟಿನೊ ಘೋಷಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ನಿಯಮ ಮೀರಿ ಅಮೆರಿಕ ಆಟಗಾರನಿಗೆ ಬೆಂಬಲ: ಯುಎಸ್ ಸ್ಟ್ರೈಕರ್ ಫೋಲಾರಿನ್ ಬಾಲೋಗನ್ ಅವರಿಗೆ ನೀಡಲಾಗಿದ್ದ ರೆಡ್ ಕಾರ್ಡ್ ಅನ್ನು ಮರುಪರಿಶೀಲಿಸುವಂತೆ ಟ್ರಂಪ್ ಅವರು ಫಿಫಾ ಅಧ್ಯಕ್ಷರಿಗೆ ಕರೆ ಮಾಡಿದ್ದರು. ಇದರ ಬೆನ್ನಲ್ಲೇ ಆಟಗಾರನ ಅಮಾನತನ್ನು ರದ್ದು ಮಾಡಿ ಮುಂದಿನ ಪಂದ್ಯ ಆಡಲು ಅವಕಾಶ ನೀಡಲಾಗಿತ್ತು. ಈ ವಿವಾದಾತ್ಮಕ ನಿರ್ಧಾರವು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಫಿಫಾ ತನ್ನ ರಾಜಕೀಯ ತಟಸ್ಥತೆಯ ನಿಯಮವನ್ನು ಗಾಳಿಗೆ ತೂರಿದೆ ಎಂಬ ಆರೋಪ ಕೇಳಿಬಂದಿದೆ.
ಫಿಫಾ ವಿಶ್ವಕಪ್: ಸ್ಪೇನ್-ಅರ್ಜೆಂಟೀನಾ ಮುಖಾಮುಖಿ ಸಾಧನೆ ಹೇಗಿದೆ? ಇಲ್ಲಿದೆ ವಿವರಗಿIಆಇಔ: ಸಿನಿಮಾ ಬದಲು ಕಾಂಟ್ರವರ್ಸಿ ಸದ್ದು ಮಾಡಿದ್ದು ದುರದೃಷ್ಟ; ಗುರುದತ್ ಗಾಣಿಗ
ಟ್ರಂಪ್ ಸರ್ಕಾರದ ವಲಸೆ ನೀತಿಗೆ ವಿರೋಧ: ಟ್ರಂಪ್ ಆಡಳಿತದ ಕಠಿಣ ವಲಸೆ ಮತ್ತು ಸಾಮೂಹಿಕ ಗಡೀಪಾರು ನೀತಿಯನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದ್ದಾರೆ. ಇತ್ತೀಚೆಗೆ ಇಮಿಗ್ರೇಷನ್ ಆಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ ಅಧಿಕಾರಿಗಳೊಂದಿಗಿನ ಘರ್ಷಣೆಯಲ್ಲಿ ಮೂವರು ಮೃತಪಟ್ಟಿದ್ದು, ಟ್ರಂಪ್ ಆಡಳಿತಾವಧಿಯಲ್ಲಿ ವಲಸೆ ನೀತಿಯಿಂದಾಗಿ ಕನಿಷ್ಠ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಫಿಫಾ ನಿಯಮಗಳ ಉಲ್ಲಂಘನೆಯ ಆತಂಕ
ಕ್ರೀಡಾಂಗಣದ ಒಳಗೆ ಮತ್ತು ಸುತ್ತಮುತ್ತ ಆಟಗಾರರು ಹಾಗೂ ವೀಕ್ಷಕರು ಯಾವುದೇ ಧ್ವಜಗಳು, ಬ್ಯಾನರ್‌ಗಳು ಅಥವಾ ಇತರೆ ವಸ್ತುಗಳ ಮೂಲಕ ರಾಜಕೀಯ ಸಂದೇಶಗಳನ್ನು ರವಾನಿಸುವುದನ್ನು ಫಿಫಾ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಹೀಗಿದ್ದೂ ಈ ಭಾರಿ ಪ್ರತಿಭಟನೆಗೆ ಕರೆ ನೀಡಿರುವುದು ಭದ್ರತಾ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ.
ಈ ಹಿಂದೆ ಸೂಪರ್ ಬೌಲ್ ಪಂದ್ಯಾವಳಿಯ ವೇಳೆ 'Iಅಇ ಔUಖಿ' ರ‍್ಯಾಲಿ ಟವೆಲ್ ಬಳಸಿ ಗಮನ ಸೆಳೆದಿದ್ದ 'ಕಾಂಟ್ರಾ-ಐಸಿಇ' (Contra-ICE) ಕಲಾ ಒಕ್ಕೂಟವು ಈ ಬಾರಿಯ 'ಫೈನಲ್ ರೆಡ್ ಕಾರ್ಡ್' ಅಭಿಯಾನದ ನೇತೃತ್ವ ವಹಿಸಿದೆ. ಇದರೊಂದಿಗೆ ಮೇಕ್ ದಿ ರೋಡ್ ನ್ಯೂಜೆರ್ಸಿ, 50501, ಪೀಪಲ್ ವರ್ಸಸ್ ದಿ ಮಷೀನ್ಸ್ ಮತ್ತು ಸೌತ್ ಏಷ್ಯನ್ಸ್ ಫಾರ್ ಅಮೆರಿಕಾ ಸೇರಿದಂತೆ ಹಲವು ಸಂಸ್ಥೆಗಳು ಈ ಪ್ರತಿಭಟನೆಯಲ್ಲಿ ಕೈಜೋಡಿಸಿವೆ ಎನ್ನಲಾಗಿದೆ.

