HEALTH TIPS

ಕೊನೆಗೂ ವೃದ್ಧೆಯ ಪರವಾಗಿ ಆದೇಶ ನೀಡಿದ ರಾಜ್ಯ ಚುನಾವಣಾ ಆಯೋಗ: ಕೈಪಂಗಳ ಪಾರ್ವತಿ ಕೆ. ಅವರನ್ನು ಮತದಾರ ಪಟ್ಟಿಗೆ ಸೇರಿಸಲು ಜಿಲ್ಲಾ ಚು.ಅಧಿಕಾರಿಗೆ ನಿರ್ದೇಶನ

ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ.ಒಂದನೇ ವಾರ್ಡಿನ ಕೈಪಂಗಳ ದಿ.ಕೃಷ್ಣ ಭಟ್ ಅವರ ಪತ್ನಿ ಪಾರ್ವತಿ ಕೆ.(80) ಎಂಬವರ ಹೆಸರನ್ನು ಎಸ್.ಐ.ಆರ್.ವೇಳೆ ಪಟ್ಟಿಯಿಂದ ಹೊರಗಿಟ್ಟು ಡಿಲೀಟ್ ಮಾಡಿಸಿದ ದೂರಿನ ಸಂಬಂಧ ರಾಜ್ಯ ಚುನಾವಣಾ ಆಯುಕ್ತರು ಮಹತ್ತರ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.  



ಪಾರ್ವತಿ ಕೆ. ಅವರ ಪುತ್ರ ರಾಜಗೋಪಾಲ ಕೈಪಂಗಳ ಅವರು ರಾಜ್ಯ ಚುನಾವಣಾ ಆಯುಕ್ತರಿಗೆ ಈ ಬಗ್ಗೆ ದೂರು ನೀಡಿದ್ದು, ಇದೀಗ ಅವರ ಸುಧೀರ್ಘ ಹೋರಾಟದ ಫಲವಾಗಿ ಕಾಸರಗೋಡು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಕೂಡಲೇ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿ ಎಸ್.ಐ.ಆರ್ ಲೋಪ ಸರಿಪಡಿಸುವಂತೆ ಆದೇಶ ಹೊರಡಿಸಿದ್ದಾರೆ.

ಅತಿಸೂಕ್ಷ್ಮ ಮತದಾರರ ಪಟ್ಟಿ ಪರಿಷ್ಕರಣೆ(ಎಸ್.ಐ.ಆರ್) ಸಂಬಂಧಿಸಿ ಅದರ ನ್ಯೂನತೆಗಳು ಮತ್ತು ಜನಜಾಗೃತಿಗಾಗಿ ಕಳೆದ ಫೆಬ್ರವರಿ 22 ರಂದು ಸಾಮಾಜಿಕ ಕಾರ್ಯಕರ್ತ ರಾಜಗೋಪಾಲ ಕೈಪಂಗಳ ಅವರು ಬೆಳ್ಳೂರಿನಿಂದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಮುನ್ನಡೆಸಿದ ಏಕವ್ಯಕ್ತಿ ಪಾದಯಾತ್ರೆ ನಡೆಸಿದ್ದರು. ಆ ವೇಳೆ ತನ್ನ ತಾಯಿಗೆ ಆದ ಅನುಭವ ಇತರರಿಗೆ ಆಗದಂತೆ, ವಿವಿಧ ಕಾರಣಗಳಿಂದ ಸೂಕ್ಷ್ಮ ಮತದಾರರ ಪಟ್ಟಿ ಪರಿಶೀಲನೆ ವೇಳೆ ಅನುಸರಿಸಬೇಕಾದ ಕ್ರಮಗಳು, ನೀಡಬೇಕಾದ ಮಾಹಿತಿಗಳ ಬಗ್ಗೆ ಪಾದಯಾತ್ರೆಯಾದ್ಯಂತ ಜನಜಾಗೃತಿ ಮೂಡಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries