ಬದಿಯಡ್ಕ : ಆತ್ಮ ಕಾಸರಗೋಡು ಇದರ ಸಾಮಥ್ರ್ಯ ವೃದ್ಧಿ ತರಬೇತಿ ಕಾರ್ಯಕ್ರಮದಂಗವಾಗಿ ಕಾರಡ್ಕ ಬ್ಲಾಕ್ ಹಾಗೂ ಕುಂಬ್ಡಾಜೆ ಕೃಷಿ ಭವನ ನೇತೃತ್ವದಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಅಣಬೆ ಕೃಷಿ ತರಬೇತಿ ಕಾರ್ಯಕ್ರಮ ನಡೆಯಿತು.
ತರಬೇತಿ ಕಾರ್ಯಕತ್ರಮವನ್ನು ಕುಂಬ್ಡಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ ಉದ್ಘಾಟಿಸಿ ಮಾತನಾಡಿದರು. ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಎ.ಸಿ.ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಪಂಚಾಯಿತಿ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಅಬೂಬಕರ್, ಪಂಚಾಯತಿ ಸದಸ್ಯರಾದ ಎಸ್. ಮೊಹಮ್ಮದ್ ಭಾಗವಹಿಸಿದರು. ಅಣಬೆ ಕೃಷಿ ಸಂಪನ್ಮೂಲ ವ್ಯಕ್ತಿಯಾಗಿ ಪಾಂಡುರಂಗ ಅವರು ಅಣಬೆ ಕೃಷಿ ತಂತ್ರಜ್ಞಾನಗಳ ಕುರಿತು ತರಗತಿ ನಡೆಸಿದರು. ಕೃಷಿ ಅಧಿಕಾರಿ ಗಿರೀಶ್ ಬಿ. ಸ್ವಾಗತಿಸಿ, ಕೃಷಿ ಸಹಾಯಕ ಪುರುಷೋತ್ತಮನ್ ಎಂ. ವಂದಿಸಿದರು. ತರಬೇತಿ ಕಾರ್ಯಕ್ರಮದಲ್ಲಿ ಪಂಚಾಯಿತಿ ವ್ಯಾಪ್ತಿಯ ಕೃಷಿಕರು ಭಾಗವಹಿಸಿದ್ದರು.

.jpg)
.jpg)
